ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಪಟ್ಟಣದಲ್ಲಿ ಅ.2ರಂದು ಎಸ್ಡಿಪಿಐ ಮುಸ್ಲಿಂ ಪುಂಡರು ಮುಗ್ಧ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ, ಶ್ರೀರಾಮ ಸೇನೆಯ ಉತ್ತರ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹೇಶ್ ರೋಖಡೆ, ತಾಲೂಕಾ ಹಿಂದೂ ಸಂಘಟನೆಗಳ ಸಂತೋಷ ಕುರಿ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ಶಿರಹಟ್ಟಿ ತಾಲೂಕಿನಲ್ಲಿ ಮುಸ್ಲಿಂ ಪುಂಡರ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಗ್ಧ ಹಿಂದೂಗಳನ್ನೇ ಗುರಿಯಾಗಿಸಿ ಹಲ್ಲೆ ನಡೆಸುತ್ತಿದ್ದಾರೆ. ಸೆ. 7ರಂದು ಶಿರಹಟ್ಟಿಯಲ್ಲಿ ನಡೆದ ಮುಸ್ಲಿಂರ ಸಣ್ಣ ಉರುಸಿನ ಗಂಧದ ಸಮಾರಂಭದಲ್ಲಿ ಪಿಎಸ್ಐ ಚನ್ನಯ್ಯ ದೇವೂರರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕೆಲ ಪ್ರಭಾವಿ ಮುಸ್ಲಿಂ ಮುಖಂಡರು ಈ ಪುಂಡರ ಒತ್ತಡಕ್ಕೆ ಮಣಿದು ಚನ್ನಯ್ಯ ದೇವೂರ ಅವರನ್ನು ಶಿರಹಟ್ಟಿಯಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿಸಿದ್ದಾರೆ. ಈ ಹಿಂದೆ ಲಕ್ಷ್ಮೇಶ್ವರದಲ್ಲಿ ನಡೆದಿದ್ದ ಘಟನೆಗೆ ವರ್ಗಾವಣೆಗೊಂಡಿದ್ದ ಈರಪ್ಪ ರಿತ್ತಿ ಅವರನ್ನು ಶಿರಹಟ್ಟಿಗೆ ವರ್ಗಾವಣೆ ಮಾಡಿದ್ದರಿಂದ ಮುಸ್ಲಿಂ ಎಸ್ಡಿಪಿಐ ಮತಾಂಧರು ತಾವು ಏನು ಮಾಡಿದರೂ ನಡೆಯುತ್ತೆ ಎಂಬ ಅಹಂನಲ್ಲಿದ್ದಾರೆ.
ಹಿಂದೂಗಳ ಪವಿತ್ರ ಹಬ್ಬ ನವರಾತ್ರಿಯ ಸಂಭ್ರಮವನ್ನು ಹಾಳು ಮಾಡಿ ಶಿರಹಟ್ಟಿಯಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಹಾಳು ಮಾಡುವ ದುಷ್ಟ ಹುನ್ನಾರ ಹೊಂದಿರುವುದು ಈ ಘಟನೆಯಿಂದ ಸಾಬೀತಾಗುತ್ತಿದೆ. ಹಲ್ಲೆಯಲ್ಲಿ ಗಾಯಗೊಂಡಿರುವವರಿಗೆ ಸರಕಾರ ಕೂಡಲೇ ಪರಿಹಾರ ಘೋಷಿಸಬೇಕು. ಹಲ್ಲೆ ನಡೆಸಿರುವ ಎಸ್ಡಿಪಿಐ ಮುಸ್ಲಿಂ ಗೂಂಡಾಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರವೀಣಗೌಡ ಪಾಟೀಲ, ವೀರಣ್ಣ ಅಂಗಡಿ, ರಾಜೀವರಡ್ಡಿ ಬಮ್ಮನಕಟ್ಟಿ, ರಾಮಣ್ಣ ಕಂಬಳಿ, ವೆಂಕಟೇಶ ದೊಡ್ಡಮನಿ, ಸೋಮು ಗುಡಿ, ಸೋಮನಗೌಡ ಮರಿಗೌಡ್ರ ಮುಂತಾದವರು ಉಪಸ್ಥಿತರಿದ್ದರು.
ಪೊಲೀಸ್ ಬಂದೋಬಸ್ತ್: ಶುಕ್ರವಾರ ಶಿರಹಟ್ಟಿ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೇಟೆ ಶ್ರೀ ಆಂಜನೇಯ ದೇವಸ್ಥಾನದಿಂದ ಅಪಾರ ಜನಸ್ತೋಮದೊಂದಿಗೆ ಹಿಂದೂ ಕಾರ್ಯಕರ್ತರು ಘೋಷಣೆ ಕೂಗುತ್ತಾ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.



