ವಿಜಯಸಾಕ್ಷಿ ಸುದ್ದಿ, ಗದಗ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಘಟಕವು ನಗರದ ಗಾಂಧಿ ಸರ್ಕಲ್ ಬಳಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮುಷ್ಕರ ನಡೆಸಿದರು.
ಗದಗ ಜಿಲ್ಲಾ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಹನುಮೇಶ್ ಎಮ್. ಗಂಗರಾಹುತರ ಹಾಗೂ ಗದಗ ಜಿಲ್ಲಾ ಯುಎಫ್‌ಬಿಯು ಘಟಕದ ಕನ್ವೀನರ್ ಕಾಮ್ರೆಡ್ ಅಮರೇಶ್ವರ ಕೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವಾಲಯವನ್ನು ಒತ್ತಾಯಿಸಿ ಈಗಾಗಲೇ ಐಬಿಎ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಗಳ ನಡುವೆ ಒಪ್ಪಿಗೆಯಾಗಿ ಅದರ ಅನುಮೋದನೆಗಾಗಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಒಪ್ಪಂದವಾಗಿ ಎರಡು ವರ್ಷಗಳು ಕಳೆದರೂ ಅಲ್ಲಿ ಅನಗತ್ಯವಾಗಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಮುಷ್ಕರದಲ್ಲಿ ಕಾಮ್ರೆಡ್ ಬಾಲಾಜಿ ಕುಲಕರ್ಣಿ, ಕಾಮ್ರೆಡ್ ಮಂಜುನಾಥ ಭಜಂತ್ರಿ, ಕಾಮ್ರೆಡ್ ಮಂಜುನಾಥ ದೊಡ್ಡಮನಿ, ಕಾಮ್ರೆಡ್ ಶಿವಾನಂದ್, ಕಾಮ್ರೆಡ್ ಯಚ್ಚರಸ್ವಾಮಿ ನಾಯಕ, ಕಾಮ್ರೆಡ್ ಅಶೋಕ ಗೌಡ್ರ, ಕಾಮ್ರೆಡ್ ಪ್ರೇಮ್, ಕಾಮ್ರೆಡ್ ಸೂರ್ಯ ಕುಮಾರ್, ಕಾಮ್ರೆಡ್ ಹರೀಶ್ ಲೋಕಾಪುರ್, ಕಾಮ್ರೆಡ್ ರಾಜು ಸಿಂಗಾಡಿ, ಕಾಮ್ರೆಡ್ ದೀಪಕ್ ಕೊಲ್ಲಾಪುರಿ, ಕಾಮ್ರೆಡ್ ದೀಪು ಮಾಲಾ, ನೇಹಾ, ಸುಧಾರಾಣಿ, ಪ್ರೀತಿ, ಲೋಕೇಶ್, ಕಾಮ್ರೆಡ್ ವಿಜಯ್, ಕಾಮ್ರೆಡ್ ವಿನೋದ್ ಹೊಸೂರ, ಮೌಲಾಸಾಬ್, ಗಾಯತ್ರಿ, ಶಿಲ್ಪಾ, ಪ್ರಿಯ ಸಜ್ಜನ್, ಚೈತ್ರ, ಪ್ರದೀಪ್, ಮಂಜುನಾಥ ಭಜಂತ್ರಿ ಮುಂತಾದವರು ಪಾಲ್ಗೊಂಡಿದ್ದರು.



