ವಿಜಯಸಾಕ್ಷಿ ಸುದ್ದಿ, ಗದಗ : ಅ. 21ರಂದು ಮಧ್ಯಾಹ್ನ ಗದಗ ನಗರದ ಮುಳಗುಂದ ನಾಕಾದ ರಸ್ತೆಗೆ ಹೊಂದಿರುವ ಉಡುಪಿ ಹೊಟೇಲ್ ಮುಂಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ನಡೆದ ಅವಘಡದಿಂದ ಮೃತಪಟ್ಟ ನಜೀರಸಾಬ ಬೈಲಹುಲಿ ಸಾವಿಗೆ ಕಾರಣರಾದ ಶುಭಂ ಗ್ಯಾಸ್ ಕನ್‌ಸ್ಟ್ರಕ್ಷನ್ ಏಜೆನ್ಸಿ ಹಾಗೂ ಸಂಬಂಧಪಟ್ಟವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಮುಂದಾಳತ್ವದಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸುಮಾರು 1 ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಸಂಬಂದಪಟ್ಟ ಕಾರ್ಮಿಕ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮೃತರ ಪರಿಹಾರಕ್ಕಾಗಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸಭೆ ಏರ್ಪಡಿಸಿದ್ದು, ಸದರಿ ಸಭೆಯಲ್ಲಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ನಿರ್ಧಾರ ಕೈಗೊಳ್ಳೋಣ.
ಪೊಲೀಸ್ ಇಲಾಖೆಯ ಮಧ್ಯಸ್ಥಿಕೆಯಲ್ಲಿ ಶುಭಂ ಕನ್‌ಸ್ಟ್ರಕ್ಷನ್ ಏಜೆನ್ಸಿಯಿಂದ ಹಾಗೂ ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಪೌರಾಯುಕ್ತರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮೃತ ವ್ಯಕ್ತಿಯ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಜಿಲ್ಲಾ ಉಪಾಧ್ಯಕ್ಷ ಭಾಷಾಸಾಬ ಮಲ್ಲಸಮುದ್ರ, ನಾಗರಾಜ ಕ್ಷತ್ರಿಯ, ಹಾಜಿಅಲಿ ಕೊಪ್ಪಳ, ಮೆಹಬೂಬ ಮುಲ್ಲಾ, ಇರ್ಫಾನ್ ಮಾಳೆಕೊಪ್ಪ, ಸಾಧಿಕ ಗುಳಗುಂದಿ, ಇಮ್ತಿಯಾಜ್ ಢಾಲಾಯತ, ಜಬ್ಬಾರ, ನಿಜಾಮ, ದಾದು ಮುಂಡರಗಿ, ಮೆಹಬೂಬ ಹಣಗಿ, ಉಸ್ಮಾನ ಮಾಳೆಕೊಪ್ಪ, ಮುಜಮ್ಮಿಲ್ ಶಿಗ್ಗಿ, ಮುಜಾಹಿದ್, ಮತ್ತಿನ್ ಹುಬ್ಬಳ್ಳಿ, ರಿಯಾಜ್ ಗುಡಿಸಲಮನಿ, ರಿಯಾಜ್ ಫಾಮಡಿ, ಸುಲೇಮಾನ್ ಮಾಳೆಕೊಪ್ಪ, ಯೂಸುಫ ಶಿರವಾರ, ಮೆಹಬೂಬ ಅತ್ತಾರ, ಮಹಮ್ಮದ ಬರದೂರ ಸೇರಿದಂತೆ ಮುಂತಾದವರು ಇದ್ದರು.