ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಹೊಸ ಬಸ್ ನಿಲ್ದಾಣಕ್ಕೆ ಹೊಂದಿಕೊAಡಿರುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯ ನಡುವೆ ಡಿವೈಡರ್ ಅಳವಡಿಸವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಲೋಕೋಪಯೋಗಿ ಇಲಾಖೆಯ ಕ್ರಮ ಖಂಡಿಸಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಶರಣು ಗೋಡಿ, 2-3 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿಯ ನಡುವೆ ಗದಗ ನಾಕಾದಿಂದ ಶಿಗ್ಲಿ ನಾಕಾವರೆಗೆ ಸಿಸಿ ರಸ್ತೆ ಮಾಡಿದ ವೇಳೆ ರಸ್ತೆ ಮಧ್ಯ ಡಿವೈಡರ್ ಅಳವಡಿಸುವಂತೆ ಕಳೆದ ಮೇ ತಿಂಗಳಲ್ಲಿ ಇಲಾಖೆಗೆ ಮನವಿ ಮಾಡಿ 20 ದಿನಗಳ ಗಡುವು ನೀಡಲಾಗಿತ್ತು. ಇದುವರೆಗೂ ಇದರ ಬಗ್ಗೆ ಯಾವುದೇ ಈ ಬಗ್ಗೆ ಪ್ರಗತಿಯಾಗಿಲ್ಲ. ಇದು ಇಲಾಖೆಯ ಬೇಜಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಅತಿಯಾದ ಸಂಚಾರ ದಟ್ಟಣೆ ಇರುವ ರಸ್ತೆಯಾಗಿರುವದರಿಂದ ನಿತ್ಯ ಅನೇಕ ಅಪಘಾತಗಳು ಇಲ್ಲಿ ಸಂಭವಿಸುತ್ತಿವೆ. ವಿಭಜಕ ಇಲ್ಲದ್ದರಿಂದ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ವಾಹನ ಚಲಾವಣೆ ಮಾಡುತ್ತಾರೆ. ಇದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೆ ಎಂದು ಪ್ರಶ್ನಿಸಿದರು.
ತಾಲೂಕಾಧ್ಯಕ್ಷ ನಾಗೇಶ ಅಮರಾಪೂರ, ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ಯಲ್ಲಪ್ಪ ಹಂಜಗಿ, ಕೈಸರ್ ಅಹ್ಮದ್‌ಅಲಿ, ದುದ್ದು ಅಕ್ಕಿ, ಆಶ್ಪಾಕ್ ಬಾಗೋಡಿ, ಜ್ಯೋತಿ ಸೋಮಶೇಖರ, ಮಾಲತೇಶ ಉಮಚಗಿ, ಝರೀನಾ ಮುಲ್ಲಾ, ಶಕುಂತಲಾ ನೂಲ್ವಿ, ಮುತ್ತುರಾಜ್ ಗಡೆಪ್ಪನವರ, ಬಾಬು ಮನಿಯಾರ, ಇಲಿಯಾಸ್ ಮನಿಯಾರ್, ಇರ್ಪಾನ್ ಹರಪನಹಳ್ಳಿ, ಶರಣಪ್ಪ ಬಸಾಪೂರ, ಪೀರಸಾಬ ರಿತ್ತಿ, ನದೀಮ್ ಕುಂದಗೋಳ, ಮಂಜುನಾಥ ಲಮಾಣಿ, ಸಚಿನ್ ಲಮಾಣಿ, ಶರಣು ಬೆಳವಿಗಿ, ಪ್ರವೀಣ, ಅಭಿಷೇಕ ಸಾತಪೂತೆ, ಕಾರ್ತಿಕ ಬಳ್ಳಾರಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ ತಿಮ್ಮಾಪೂರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಮನವಿ ಸ್ವೀಕರಿಸಿ, ಒಂದು ತಿಂಗಳೊಳಗಾಗಿ ರಸ್ತೆ ಡಿವೈಡರ್ ಮಾಡುವದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು.