ವಕೀಲರ ಮೇಲೆ ಪೊಲೀಸ್ರ ಹಲ್ಲೆ: ಲಾಠಿ ಸುಟ್ಟು ಧರಣಿ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

0
Spread the love

ಹಾಸನ: ಚಿಕ್ಕಮಗಳೂರು ವಕೀಲರ ಸಂಘದ ವಕೀಲರ ಮೇಲೆ ಪೋಲಿಸರು ನಡೆಸಿದ ಹಲ್ಲೆ ಮತ್ತು ಅದೇ ಪೋಲಿಸರು ಪೋಲಿಸ್ ಲಾಠಿಯನ್ನು ಸುಟ್ಟು ಧರಣಿ ನಡೆಸುತ್ತಿರಿರುವ ಬಗ್ಗೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ವಕೀಲರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ನಗರದ ಹೊಸ ಬಸ್ ನಿಲ್ದಾಣ ಎದುರು ಇರುವ ಜಿಲ್ಲಾ ವಕೀಲರ ಸಂಘದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನೂತನ ಮೇಲ್ ಸೇತುವೆ ಮೇಲೆ ಬಂದು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಇದೆ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಮಾಧ್ಯಮದೊಂದಿಗೆ ಮಾತನಾಡಿ, ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರಾದ ವಕೀಲ ಪ್ರೀತಮ್ ರವರು ಎಲ್ಮೇಟ್ ಧರಿಸಿಲ್ಲ ಎಂಬ ಕಾರಣಕ್ಕೆ ಆತನ ಬೈಕ್ ಕೀಯನ್ನು ಅಕ್ರಮವಾಗಿ ತೆಗೆದುಕೊಂಡಾಗ ಏಕೆ ಹೀಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ವಕೀಲರನ್ನು ಠಾಣೆಯ ಒಳಗೆ ಕರೆದುಕೊಂಡು ಹೋಗಿ ಪೋಲಿಸ್ ಸಿಬ್ಬಂದಿಗಳು ೬ ಜನರು ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದುಷ್ಕೃತ್ಯದ ವಿರುದ್ಧ ಚಿಕ್ಕಮಗಳೂರು ವಕೀಲರ ಸಂಘವು ಪ್ರಶ್ನಿಸಿ ಹೋರಾಟ ಮಾಡಿದ್ದರ ಅನ್ವಯ ಈ ಪ್ರಕರಣ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡವಳಿ ಹಂತದಲ್ಲಿದ್ದರೂ ಸಹ ಚಿಕ್ಕಮಗಳೂರು ಪೋಲಿಸರು ರಸ್ತೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಬ್ದಾರಿಯಲ್ಲಿರುವ ಪೋಲಿಸರು ಧರಣಿ ಮಾಡಿರುವುದು ದುರದುಷ್ಟಕರ ಮತ್ತು ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದರು.

ವೃತ್ತಿನಿರತ ಮತ್ತು ಗೌರವ ಕಾಪಾಡುವ ಪೋಲಿಸ್ ಲಾಠಿಯನ್ನು ನಡು ರಸ್ತೆಯಲ್ಲಿ ಬಿಸಾಡಿ ಬೆಂಕಿ ಹಚ್ಚಿ ತೊಡೆ ತಟ್ಟಿ ವಕೀಲರನ್ನು ಅವಹೇಳನಕಾರಿಯಾಗಿ ನಿಂದಿಸಿ ವಕೀಲರುಗಳ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮೀಡಿಯಾದ ಮುಂದೆ ನೇರವಾಗಿ ಹೇಳಿಕೆ ನೀಡುತ್ತಿರುವುದು ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಪೋಲಿಸರು ಮುಂದಾಗಿರುತ್ತಾರೆ ಎಂದು ಆರೋಪಿಸಿದರು.

ವಕೀಲರಲ್ಲದೆ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸಿರುವುದು ಕಾನೂನಿನ ನೇರ ಉಲ್ಲಂಘನೆಯಾಗಿರುವುದರಿಂದ ಗೃಹ ಮಂತ್ರಿಗಳು ಪುಂಡ ಪೋಲಿಸ್ ಅಧಿಕಾರಿ ಮತ್ತು ಪೇದೆಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನ್ಯಾಯ ವ್ಯವಸ್ಥೆಯನ್ನು ಬುಡ ಮೇಲೆ ಮಾಡಲು ಹೋರಾಟಿರುವ ಪೋಲಿಸ್ ದುಂಡವರ್ತನೆಗೆ ಕ್ರಮ ಜರುಗಿಸಬೇಕೆಂದು ಹಾಸನ ಜಿಲ್ಲಾ ವಕೀಲರ ಸಂಘದಿಂದ ಮನವಿ ಮಾಡುವುದಾಗಿ ಹೇಳಿದರು.


Spread the love

LEAVE A REPLY

Please enter your comment!
Please enter your name here