ರಾಜ್ಯ ಮದ್ಯ ಮಾರಾಟಗಾರರ ಪ್ರತಿಭಟನೆ ಇಂದು

0
wine merchents
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಬೆಂಗಳೂರು ಹಾಗೂ ಗದಗ ಜಿಲ್ಲಾ ಮದ್ಯ ಮಾರಾಟಗಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಫೆ.೨೨ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಿದ್ದೇವೆ ಎಂದು ಗದಗ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ್ಷಧ್ಯಕ್ಷ ವಿಠ್ಠಲ ಖಟವಟೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

ಈ ಪ್ರತಿಭಟನೆಯಲ್ಲಿ ಗದಗಿನಿಂದ ೩೦ ಜನ ಸನ್ನದುದಾರರು ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು. ಸುದರ್ಶನ ಹಾನಗಲ್, ವಿಕಾಸ್ ಚವಾಣ್ ಅಶೋಕ್ ಬೇವಿನಕಟ್ಟಿ, ಅರ್ಜುನ್ ಕಲಾಲ್, ಭೀಮು ಕಲಾಲ್, ವಿನಾಯಕ ಕಬಾಡಿ, ಯಮನಪ್ಪ ಈಳಿಗೆರ, ವೆಂಕಟೇಶ್ ಖಟವಟೆ ಸೇರಿದಂತೆ ಎಲ್ಲ ಸನ್ನದುದಾರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here