ಗದಗ: ಪರಿಹಾರ ಕೊಡದ ಹಿನ್ನೆಲೆ, ಸ್ಮಶಾನಕ್ಕೆ ತೆರಳಲು ಹೊಲದ ಮಾಲೀಕ ರಸ್ತೆ ಬಿಡದಿದ್ದನ್ನು ಖಂಡಿಸಿ ಗ್ರಾಮ ಪಂಚಾಯತ್ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಚಿಕ್ಕಮಣ್ಣೂರು ಗ್ರಾಮದಲ್ಲಿ ನಡೆದಿದೆ.
Advertisement
ಯಲ್ಲಮ್ಮ ವಾಲ್ಮೀಕಿ (75) ಮೃತ ಮಹಿಳೆಯಾಗಿದ್ದು, ಗ್ರಾಮ ಪಂಚಾಯತಿ ಮುಂದೆ ಮೃತ ಯಲ್ಲಮ್ಮ ಸಂಬಂಧಿಕರು ಹಾಗೂ ಗ್ರಾಮಸ್ಥರು ಜಮಾಯಿಸಿ ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ದಾರಿ ಇಲ್ಲದ ಹಿನ್ನೆಲೆ ಗ್ರಾಮ ಪಂಚಾಯತಿ ಮುಂದೆ ಶವ ಇಟ್ಟು ಗ್ರಾಮ ಪಂಚಾಯತಿ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.