ಪಿಎಸ್ಐ ಅಮಾನತಿಗೆ ಆಗ್ರಹ: ಪ್ರತಿಬಂಧಕಾಜ್ಞೆಗೆ ಕ್ಯಾರೇ ಎನ್ನದ ಪ್ರತಿಭಟನಾಕಾರರು ಅರೆಸ್ಟ್!

0
Spread the love

ಗದಗ: ಪಿಎಸ್ಐ ಅಮಾನತಿಗೆ ಒತ್ತಾಯಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ಹಾಗೂ ಗೋಸಾವಿ ಸಮಾಜವು ಲಕ್ಷ್ಮೇಶ್ವರ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

Advertisement

ಆದರೆ ಪ್ರತಿಭಟನಾಕಾರರು ಪ್ರತಿಬಂಧಕಾಜ್ಞೆ ನಿಯಮಕ್ಕೆ ಕ್ಯಾರೇ ಎನ್ನದೇ ಲಕ್ಷ್ಮೇಶ್ವರದ ಪಟ್ಟಣದ ಹಾವಳಿ ಹಣಮಪ್ಪನ ದೇವಸ್ಥಾನದ ಬಳಿ ಪ್ರತಿಭಟನೆ ಮಾಡಿದರು. ಈ ಹಿನ್ನೆಲೆ ಪ್ರತಿಭಟನೆ ನಡೆಸಿದ ಶ್ರೀರಾಮಸೇನೆಯ ಕಾರ್ಯಕರ್ತರು ಸೇರಿ ಗೋಸಾವಿ ಸಮಾಜದ ಮಹಿಳೆಯರನ್ನು ಪೊಲೀಸರು ಅರೆಸ್ಟ್ ಮಾಡಿದರು.

ಶ್ರೀರಾಮಸೇನೆ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ್ ಸೇರಿ ಹಲವು ಮುಖಂಡರು, ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಇನ್ನೂ ಇಂದು ಗೋಸಾವಿ ಸಮಾಜದ ಮಹಿಳೆಯರು ಹಾಗೂ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರಿಂದ ಪಿಎಸ್ಐ ಈರಪ್ಪ ರಿತ್ತಿ ಅಮಾನತುಗೆ ಒತ್ತಾಯ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಟ್ಟಣದಲ್ಲಿ 163 ನಿಷೇಧಾಜ್ಞೆ ಜಾರಿ ಲೆಕ್ಕಿಸದೇ, ನೂರಾರು ಪೋಲೀಸರ ಸರ್ಪಗಾವಲು ಬೇಧಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆ ಕಾರ್ಯಕರ್ತರನ್ನು ಖಾಕಿಪಡೆ ವಶಕ್ಕೆ ಪಡೆದಿದೆ.

ಪ್ರತಿಭಟನೆ ವೇಳೆ ಪಿಎಸ್ಐ ಈರಪ್ಪ ರಿತ್ತಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಅಂತ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಈರಪ್ಪ ರಿತ್ತಿಯನ್ನು ಅಮಾನತು ಮಾಡುವಂತೆ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.

ಚಿಕ್ಕ ಚಿಕ್ಕ ಮಕ್ಕಳ ಸಮೇತ ಪ್ರತಿಭಟನೆ ಮಾಡಿದ ಮಹಿಳೆಯರನ್ನು ಪೊಲೀಸರು ಈ ವೇಳೆ ವಶಕ್ಕೆ ಪಡೆದಿದ್ದಾರೆ.

ಲಕ್ಷ್ಮೇಶ್ವರ ಬಂದ್ ಹಿನ್ನೆಲೆ, ಪಟ್ಟಣದಲ್ಲಿ ನೂರಾರು ಪೊಲೀಸರಿಂದ ಸರ್ಪಗಾವಲು ಏರ್ಪಡಿಸಲಾಗಿದೆ.


Spread the love

LEAVE A REPLY

Please enter your comment!
Please enter your name here