ಶಾಲಾ-ಕಾಲೇಜುಗಳಲ್ಲಿ ನೈತಿಕ ಮೌಲ್ಯದ ಶಿಕ್ಷಣ ನೀಡಿ: ಶಹಜಾನ್ ಮುದಕವಿ

0
Spread the love

ಗದಗ:  ಇಂದಿನ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಸೈದ್ದಾಂತಿಕವಾದ ಶಿಕ್ಷಣ ಇಲ್ಲದಂತಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಉಪಕುಲಸಚಿವ ಶಹಜಾನ್ ಮುದಕವಿ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಪಂಚಾಚಾರ್ಯ ಜಗದ್ಗುರು ವೇದ ಸಂಸ್ಕೃತ ಪಾಠಶಾಲೆಯಲ್ಲಿ ಕಪ್ಪತ್ತಗಿರಿ ಫೌಂಡೇಶನ್ ರಾಜ್ಯ ಸಮಿತಿ ಏರ್ಪಡಿಸಿದ್ದ ವಚನ ಸಂಜೆ ಹಾಗೂ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಸಂಸ್ಕ್ರತಿ ಕೊಡುವ ಮೌಲ್ಯಗಳನ್ನು ಕೊಟ್ಟಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಹಜಾನ್ ಮುದಕವಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕರಾದ ಚಂದ್ರಕಲಾ ಇಟಗಿಮಠ ಮಾತನಾಡಿ, ನಮ್ಮ ಫೌಂಡೇಶನ್ ವತಿಯಿಂದ ಈಗಾಗಲೇ ಕಳಸಾಪೂರ ಗ್ರಾಮದಲ್ಲಿ ಜಾನಪದ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದು ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಿಲಾಗಿದ್ದು ಅದರ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು. ಅಷ್ಟೇ ಅಲ್ಲದೆ ಸಾರ್ವಜನಿಕರ ಸಹಕಾರದಿಂದ ಜಾನಪದ ಕಲೆಯನ್ನು ಉಳಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಜಾನಪದ ಕಲಾವಿದ ವೀರಣ್ಣ ಅಂಗಡಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಶಕುಂತಲಾ ಸಿಂಧೂರ, ಗಣ್ಯರಾದ ಶರದ್‌ರಾವ ಹುಯಿಲಗೋಳ, ಜನಪದ ಹಾಗೂ ಜಾನಪದ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿ, ಜನಪದ ಉಳಿವಿಗಾಗಿ ಇಂದಿನ ಯುವ ಪೀಳಿಗೆ ಮುಂದಾಗಬೇಕು ಎಂದರಲ್ಲದೇ, ಕಪ್ಪತ್ತಗಿರಿ ಫೌಂಡೇಶನ್ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಿಶ್ರಾಂತ ಪ್ರಾಚಾರ್ಯ ಶಂಕ್ರಪ್ಪ ಗಾಂಜಿ, ಹಿರಿಯ ಸಾಹಿತಿ ಎ ಎಸ್ ಮಕಾನದಾರ, ಸಿ.ಬಿ ಪಲ್ಲೇದ, ಸ್ಪಂದನ ಸಂಸ್ಥೆಯ ಎಮ್ ಜಿ ಖಂಡಮ್ಮನವರ್ ಇದ್ದರು. ಕಾರ್ಯಕ್ರಮದ ಸಾನಿಧ್ಯವನ್ನು ಗುರುಸಿದ್ದಯ್ಯಸ್ವಾಮಿ ಹಿರೇಮಠ ವಹಿಸಿದ್ದರು. ವಚನ ಗೋಷ್ಠಿಯಲ್ಲಿ ಶಿಲ್ಪಾ ಮ್ಯಾಗೇರಿ, ಶಿವಲೀಲಾ ಧನ್ನಾ, ನೀಲಮ್ಮ ಅಂಗಡಿ, ಅನಸೂಯಾ ಮಿಟ್ಟಿ, ಮಹಾಂತೇಶ್ ಬೆರಗಣ್ಣವರ, ನಾಗರತ್ನ ಹೊಸಮನಿ, ಲಕ್ಷ್ಮಿ ಕೋಡಿಹಳ್ಳಿ ಭಾಗವಹಿಸಿದ್ದರು


Spread the love

LEAVE A REPLY

Please enter your comment!
Please enter your name here