ಬೆಂಗಳೂರು:- ವ್ಹೀಲಿಂಗ್ ಥ್ರಿಲ್ ಗಾಗಿ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮನನ್ನು ಆಡುಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ರಾಜು ಅಲಿಯಾಸ್ ಕುಪ್ಪಸ್ವಾಮಿ ಬಂಧಿತ ಬೈಕ್ ಕಳ್ಳ. ಆರೋಪಿಯಿಂದ ಸುಮಾರು 1 ಕೋಟಿ 25 ಲಕ್ಷ ಮೌಲ್ಯದ 42 ರಾಯಲ್ ಎನ್ ಸಿಸಿ ಬೈಕ್ ವಶಕ್ಕೆ ಪಡೆಯಲಾಗಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಮೂರು ಬೈಕ್ ಕಳ್ಳತನ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೋಲೀಸರು, ಹೊಸುರು ರಸ್ತೆ ಬಳಿ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ರಾಜುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸೈಕೋ ಕಳ್ಳ, ವ್ಹಿಲಿಂಗ್ ಮಾಡಿ ಪೆಟ್ರೋಲ್ ಖಾಲಿಯಾದ ಬಳಿಕ ಬೈಕ್ ನ ಬಿಟ್ಟು ಹೋಗುತ್ತಿದ್ದ. ಈತ ವ್ಹೀಲಿಂಗ್ ಥ್ರಿಲ್ ಗಾಗಿ ಕಳ್ಳತನ ಮಾಡುತ್ತಿದ್ದ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


