ವಿಜಯಸಾಕ್ಷಿ ಸುದ್ದಿ, ಗದಗ : ಸಾವಿರಾರು ಜಾತಿ, ಮತ, ಪಚಿಥ, ಧರ್ಮಗಳ, ವಿವಿಧ ಸಂಸ್ಕೃತಿ ಪರಂಪರೆ ಹೊಂದಿದ ಜನ ಸಮುದಾಯಗಳನ್ನು ಒಂದೇ ಕುಟುಂಬದವರಂತೆ ಜೀವಿಸಬೇಕೆಂಬ ರಾಷ್ಟ್ರೀಯತೆಯನ್ನು ದೇಶದಲ್ಲಿ ಪುನರುಜ್ಜೀವನಗೊಳಿಸುವಲ್ಲಿ ಪಂಡಿತ ದೀನ ದಯಾಳ ಉಪಾಧ್ಯಾಯ ಅವರ ಕೊಡುಗೆ ಅಪಾರ ಎಂದು ಬಿಜೆಪಿ ಹಿರಿಯ ಮುಖಂಡ ನಾಗರಾಜ ಕುಲಕರ್ಣಿ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನ ದಯಾಳ ಉಪಾಧ್ಯಾಯರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡುತ್ತಿದ್ದರು.
ಕಾಂಗ್ರೆಸ್‌ನ ನಿರಂಕುಶ ಪ್ರಭುತ್ವದಿಂದ ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಜನಸಂಘ, ಜನತಾ ಪಕ್ಷ, ಬಿಜೆಪಿ ಹುಟ್ಟಿಕೊಂಡಿತು. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮೊದಲು ಎಂಬ ಧ್ಯೇಯದೊಂದಿಗೆ ಪ್ರತಿ ಜನಸಾಮಾನ್ಯರಿಗೂ ಒಳಿತಾಗಬೇಕು ಎಂದು ಹಗಲಿರುಳು ದುಡಿದ ಪಂಡಿತ್ ಅವರ ಆಚಾರ-ವಿಚಾರಗಳನ್ನು ನಾವೆಲ್ಲ ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಮ್.ಎಸ್. ಕರಿಗೌಡ್ರ, ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿದರು. ವೇದಿಕೆಯಲ್ಲಿ ಪಕ್ಕೀರೇಶ್ ರಟ್ಟೀಹಳ್ಳಿ, ಬುದ್ಧಪ್ಪ ಹಳ್ಳಿ, ಉಷಾ ದಾಸರ ಉಪಸ್ಥಿತರಿದ್ದರು.
ಮುಖಂಡರಾದ ಅಶೋಕ ನವಲಗುಂದ, ವಿಜಯಕುಮಾರ ಗಡ್ಡಿ, ಭೀಮಸಿಂಗ ರಾಠೋಡ, ಸಿದ್ದಣ್ಣ ಪಲ್ಲೇದ, ಸುನೀಲ ಮಹಾಂತಾಶೆಟ್ಟರ, ಬಸವಣ್ಣೆಪ್ಪ ಚಿಂಚಲಿ, ವಿನಾಯಕ ಮಾನ್ವಿ, ಜಾನು ಲಮಾಣಿ, ಪ್ರಕಾಶ ಅಂಗಡಿ, ಪ್ರಶಾಂತ ನಾಯ್ಕರ, ಸುರೇಶ ಮರಳಪ್ಪನವರ, ಚಂದ್ರು ತಡಸದ, ಪಕ್ಕೀರೇಶ್ ರಟ್ಟೀಹಳ್ಳಿ, ಮುತ್ತು ಮುಶಿಗೇರಿ, ಲಕ್ಷ್ಮೀ ಕಾಕಿ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮೀ ದಿಂಡೂರ, ಶಾರದಾ ಸಜ್ಜನರ, ಜಯಶ್ರೀ ಉಗಲಾಟ, ಸಂತೋಷ ಅಕ್ಕಿ, ನವೀನ ಕೊಟೆಕಲ್, ರಾಜೇಶ ಮುಟಗಾರ, ಸುರೇಶ ಚವ್ಹಾಣ, ಸ್ವಾತಿ ಅಕ್ಕಿ, ಕಾರ್ತಿಕ ಶಿಗ್ಲಿಮಠ, ವಿನೋದ ಹಂಸನೂರ ಮುಂತಾದವರು ಪಾಳ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಅಂದಿನ ಜನಸಂಘದಿಂದ ಇಂದಿನ ಬಿಜೆಪಿಯವರೆಗೆ ಸಂಘಟನೆ ವೈಚಾರಿಕತೆ ಮತ್ತು ವಿಚಾರಗಳಿಂದ ವಿಮುಖರಾಗದೆ ಜೀವ ಹಾಗೂ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಮಹನೀಯರ ತ್ಯಾಗದಿಂದ ಬಿಜೆಪಿ ಸಂಖ್ಯಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದು, ರಾಷ್ಟçಹಿತದ ಧ್ಯೇಯವೇ ಬಿಜೆಪಿಯ ಉಸಿರಾಗಿದೆ ಎಂದು ಹೇಳಿದರು.