HomeGadag News ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆಯುತ್ತಿರುವ `ಪುಲಿಗೆರೆ ಉತ್ಸವ'

 ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆಯುತ್ತಿರುವ `ಪುಲಿಗೆರೆ ಉತ್ಸವ’

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆಯುತ್ತಿರುವ `ಪುಲಿಗೆರೆ ಉತ್ಸವ’ದ ಅಂಗವಾಗಿ ಶುಕ್ರವಾರ ಗೋಧೂಳಿ ಸಮಯದಲ್ಲಿ ಪುಲಿಗೆರೆಯ ಆರಾಧ್ಯ ದೈವ ಶ್ರೀ ಸೋಮೇಶ್ವರನ ಉತ್ಸವ ಮೂರ್ತಿಯನ್ನಿರಿಸಿದ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ-ವೈಭವಗಳೊಂದಿಗೆ ಅದ್ದೂರಿಯಾಗಿ ನೆರವೇರಿತು. ಕೊಣ್ಣೂರಿನ ರಾಯಣ್ಣ ಮಹಿಳಾ ಡೊಳ್ಳು ಮೇಳ, ನಂದಿಕೋಲು ಕುಣಿತ, ವಾದ್ಯಮೇಳಗಳು ಮೆರವಣಿಗೆ ರಂಗು ಹೆಚ್ಚಿಸಿದ್ದವು.

ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ಸಾಗಿತು. ಮಾರ್ಗದಲ್ಲಿ ಜನತೆ ತಮ್ಮ ಮನೆಯ ಮುಂಭಾಗ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಶೃಂಗರಿಸುವ ಮೂಲಕ ಶ್ರೀ ಸೋಮೇಶ್ವರನಿಗೆ ಭಕ್ತಿಯಿಂದ ನಮಿಸಿದರು. ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಸೋಮೇಶ್ವರನ ಮೂರ್ತಿಯನ್ನಿರಿಸಿ ಜಾಗಟೆ ಗಂಟೆಗಳ ನಾದ, ಉದ್ಘೋಷಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಮುಖ್ಯ ಬಜಾರ್ ಸೇರಿ ಪ್ರಮುಖ ಸ್ಥಳಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್, ಜ್ಯೋತಿ ಬಾಳಿಹಳ್ಳಿಮಠ, ಪ್ರಭಾ ಪುರಾಣಿಕಮಠ, ದಿವ್ಯಾ ಬಾಳೆಹಳ್ಳಿಮಠ, ಪರಮೇಶ್ವರಿ ಪುರಾಣಿಕಮಠ, ಎಸ್.ಪಿ. ಪಾಟೀಲ, ನೀಲಪ್ಪ ಕರ್ಜಕಣ್ಣವರ, ಬಸವರಾಜ ಮೆಣಸಿನಕಾಯಿ, ಶಿವಯೋಗಿ ಅಂಕಲಕೋಟಿ, ನಿಂಗಪ್ಪ ತಹಸೀಲ್ದಾರ, ಜಿ.ಜಿ. ಹಾಲೇವಾಡಿಮಠ, ಈರಣ್ಣ ಅಂಕಲಕೋಟಿ, ಎಸ್.ಪಿ. ಪಾಟೀಲ, ವೆಂಕಟೇಶ ಮಾತಾಡೆ, ಗುರುಶಾಂತಯ್ಯ ಬಾಳಿಹಳ್ಳಿಮಠ, ಎಮ್.ಕೆ. ಕಳ್ಳಿಮಠ, ಈರಣ್ಣ ಮುಳಗುಂದ, ಕಾಶಪ್ಪ ಮುಳಗುಂದ, ಶಿದ್ದಪ್ಪ ಬೆಲ್ಲದ, ರಾಘವೇಂದ್ರ ಪೂಜಾರ, ಸಮೀರ ಪೂಜಾರ, ಸೋಮಪ್ಪ ತಂಡಿಗೇರ ದೇವಸ್ಥಾನ ಭಕ್ತರ ಸಮಿತಿ ಸದಸ್ಯರು, ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.

ಪುಲಿಗೆರೆ ಉತ್ಸವದಲ್ಲಿಂದು

ಫೆ.22ರ ಉದಯರಾಗ-2: ಬೆಳಿಗ್ಗೆ 6ಕ್ಕೆ ಗದಗನ ರಾಜೀವ ಈಶ್ವರ ಹಿರೇಮಠ ಅವರಿಂದ ಸಿತಾರ್ ವಾದನ, 7ಕ್ಕೆ ಡಾ. ಶಿವಬಸಯ್ಯ ಗಡ್ಡದಮಠ ಮತ್ತು ಸಹ ಕಲಾವಿದರಿಂದ ಹಿಂದೂಸ್ತಾನಿ ಗಾಯನ, ಸಂಜೆ 6ಕ್ಕೆ ಅರ್ಚನಾ ಕಾಮತ್ ಮತ್ತು ತಂಡದಿಂದ ಹಿಂದೂಸ್ತಾನಿ ಗಾಯನ, 7ಕ್ಕೆ ಬೆಂಗಳೂರಿನ ಕೌಶಲ್ಯ ನಿವಾಸ್ ತಂಡದಿಂದ ನೃತ್ಯ ನಾಟಕ, ರಾತ್ರಿ 8.30ಕ್ಕೆ ಸ್ಥಳೀಯ ಕಲಾವಿದೆ ಭವ್ಯ ಕತ್ತಿ ತಂಡದಿಂದ ಭರತನಾಟ್ಯ ಪ್ರದರ್ಶನವಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!