ಧಾರವಾಡ: ಧಾರವಾಡದ ಜನ್ನತನಗರದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಗ್ಯಾಂಗ್ ಒಂದು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಪರಾರಿಯಾಗಿದ್ದಾರೆ.
Advertisement
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಮೂವರು ಸದಸ್ಯರಿದ್ದ ಈ ಗ್ಯಾಂಗ್ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಬಡಿಗೆ ಹಾಗೂ ರಾಡ್‌ನಿಂದ ಒಡೆದು ಪರಾರಿಯಾಗಿದೆ. ಈ ಮೂವರೂ ಮಧ್ಯರಾತ್ರಿ ಬಂದು ಕಾರಿನ ಗಾಜನ್ನು ಒಡೆಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹಳೆಯ ಜಗಳದ ಹಿನ್ನೆಲೆ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದ್ದು, ತನಿಖೆ ಮುಂದುವರಿದಿದೆ.