ಮಂಡ್ಯ:- ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಪುನೀತ್ ಕೆರೆಹಳ್ಳಿ ತಂಡ ರಕ್ಷಿಸಿದೆ.
Advertisement
ಜಿಲ್ಲೆಯ ಮದ್ದೂರಿನ ಐಬಿ ಸರ್ಕಲ್ ಬಳಿ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ನಂತರ ಪುನೀತ್ ಕೆರೆಹಳ್ಳಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ವಾಹನದ ಚಾಲಕ ಮನ್ಸೂರು ಅಹಮ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಈಚರ್ ವಾಹನದಲ್ಲಿ ಆಕ್ರಮವಾಗಿ 30ಕ್ಕೂ ಹೆಚ್ಚು ಗೋವುಗಳ ಸಾಗಾಟ ಮಾಡಲಾಗುತ್ತಿತ್ತು. ಇದರ ಸುಳಿವು ದೊರೆತ ಪುನೀತ್ ಹಾಗೂ ತಂಡದವರು ಮದ್ದೂರಿನ ಐಬಿ ಸರ್ಕಲ್ ಬಳಿ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.