ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ ಅವರ ಪುಣ್ಯತಿಥಿ ಅಂಗವಾಗಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯೂತ್ ಫೆಡರೇಶನ್ ಆಫ್ ಇಂಡಿಯಾ ಸಂಘಟನೆಯವರು ಇಲ್ಲಿಯ 14 ಅಂಗನವಾಡಿ ಕೇಂದ್ರಗಳಿಗೆ ಸ್ಲೇಟ್, ಬಳಪ ವಿತರಿಸಿದರು.
ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಮೇಣದ ಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘಟನೆಯ ಸಂಸ್ಥಾಪಕ ಅಮೃತ ಮಂಟೂರ ಪುನೀತ್ ರಾಜಕುಮಾರ ಅವರ ನಟನೆ, ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕಿ ಶಾಹೀದಾಬೇಗಂ ಹತ್ತಿವಾಲೆ ಅವರು ಅಬ್ದುಲ್ ಕಲಾಂ ಯೂತ್ ಫೆಡರೇಶನ್‌ನ ಅಮೃತ ಮಂಟೂರ ಅವರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದರು.
ಸಮಾಜ ಸೇವಕ ಮರಿಯಪ್ಪ ವಡ್ಡರ, ಈಶ್ವರಪ್ಪ ಕುಂಬಾರ, ವೀರಭದ್ರಪ್ಪ ಕುಂಬಾರ, ಯಲ್ಲಪ್ಪಗೌಡ ಮಲ್ಲಾಪೂರ, ಅಂಬರೀಶ ಕುಂಬಾರ, ಈರಣ್ಣ ಕುಂಬಾರ, ನಾಗಪ್ಪ ಕುಂಬಾರ, ವಿಜಯಕುಮಾರ ಮಾಲ್ವಿ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.


