ಕನ್ನಡ ಕಿರುತೆರೆ ಲೋಕದ ಖ್ಯಾತ ನಿರೂಪಕಿ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಹೊರ ವಲಯದಲ್ಲಿ ಅದ್ದೂರಿಯಾಗಿ ಅನುಶ್ರೀ ಹಾಗೂ ರೋಷನ್ ಮದುವೆಯಾಗಿದ್ದಾರೆ. ಮದುವೆಯ ವೇಳೆ ಅನುಶ್ರೀಗೆ ಅಭಿಮಾನಿಗಳು ನೀಡಿದ ಗಿಫ್ಟ್ ನೋಡಿ ಅನುಶ್ರೀ ಕಣ್ಣೀರು ಹಾಕಿದ್ದಾರೆ.
ಆಗಸ್ಟ್ 28ರಂದು ಬೆಂಗಳೂರಿನ ಹೊರ ವಲಯದಲ್ಲಿರೋ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ನಡೆದಿದೆ. ಮದುವೆಯಲ್ಲಿ ಕೇವಲ ಆಪ್ತರು ಹಾಗೂ ಗೆಳೆಯರು ಭಾಗಿಯಾಗಿದ್ದರು. ಇನ್ನೂ ಅನುಶ್ರೀ ಹಾಗೂ ರೋಷನ್ ಇಬ್ಬರು ಕೂಡ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿದ್ದು ಮದುವೆಯ ಹಾಲ್ ನಲ್ಲಿ ಪುನೀತ್ ಫೋಟೋ ಇಟ್ಟು ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಅನುಶ್ರೀಗೆ ಮದುವೆಯ ದಿನ ಹಲವು ಗಿಫ್ಟ್ ಗಳು ಬಂದಿವೆ. ಆದ್ರೆ ಅದೊಂದು ಗಿಫ್ಟ್ ಮಾತ್ರ ಪ್ರತಿಯೊಬ್ಬರ ಮನಸ್ಸು ಗೆದ್ದಿದೆ. ಅಲ್ಲದೆ ಗಿಫ್ಟ್ ನೋಡಿ ಸ್ವತಃ ಅನುಶ್ರೀ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಅನುಶ್ರೀ ಹಾಗೂ ರೋಷನ್ ಮಧ್ಯದಲ್ಲಿ ಪುನೀತ್ ರಾಜ್ ಕುಮಾರ್ ಇರುವ ರೀತಿಯಲ್ಲಿ ಫೋಟೋನ ಎಡಿಟ್ ಮಾಡಿ ಗಿಫ್ಟ್ ನೀಡಲಾಗಿದೆ. ಅಪ್ಪು ಯೂತ್ ಬ್ರಿಗೇಡ್ ಈ ಗಿಫ್ಟ್ನ ನೀಡಿದೆ.
ಇದೇ ಫೋಟೋವನ್ನು ನೋಡಿದ ಅನುಶ್ರೀ ಅವರು ಕಣ್ಣೀರು ಹಾಕಿದ್ದಾರೆ. ಈ ಫೋಟೋ ಫ್ರೇಮ್ ಅನ್ನು ಉಡುಗೊರೆ ನೀಡಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಇದೇ ಫೋಟೋ ನೋಡಿದ ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸೂಷಿಸಿದ್ದಾರೆ.