ಗಾಂಜಾ ಮಾರಲೆತ್ನಿಸಿದ ಆರೋಪಿತನಿಗೆ ಶಿಕ್ಷೆ

0
NDPS
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸ್ವಂತ ಲಾಭದ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿತನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

Advertisement

ಪ್ರಕರಣದ ಆರೋಪಿ ನಿಂಗಪ್ಪ ಭರಮಪ್ಪ ಮಡಿವಾಳರ ಇವನು ೧೩-೦೩-೨೦೧೭ರಂದು ಮುಂಜಾನೆ ೯-೧೫ ಗಂಟೆಗೆ ಗದಗ ಹುಡ್ಕೋ ಲಾಸ್ಟ್ ಕ್ರಾಸ್ ಹತ್ತಿರ ರಸ್ತೆ ಬದಿಯಲ್ಲಿ ತನ್ನ ಕೈಯಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ೧ ಕೆಜಿ ೬೦ ಗ್ರಾಂ. ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡು ಸಿಕ್ಕ ಅಪರಾಧ ಕುರಿತು ಆರೋಪಿತನ ವಿರುದ್ಧ ಗದಗ ಶಹರ ವೃತ್ತದ ಸಿಪಿಐ ನಾಗರಾಜ ಎಂ.ಮಾಡಳ್ಳಿ ತನಿಖೆಯನ್ನು ಪೂರೈಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ರಾಜೇಶ್ವರ ಎಸ್.ಶೆಟ್ಟಿ ಇವರು ಸದರ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿಯಾದ ನಿಂಗಪ್ಪ ಭರಮಪ್ಪ ಮಡಿವಾಳರ ಇವನಿಗೆ ಫೆ. ೨೦ರಂದು ಕಲಂ ೨೦(ಬಿ) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ೩ ವರ್ಷ ಕಠಿಣ ಶಿಕ್ಷೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ಮಾಡಿ, ವಾದ ಮಂಡಿಸಿದ್ದರು.


Spread the love

LEAVE A REPLY

Please enter your comment!
Please enter your name here