2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡವನ್ನೇ ಕಟ್ಟುಕೊಂಡಿದೆ. ಆದರೆ ಹಲವು ವರ್ಷಗಳಿಂದ ತಂಡದ ಭಾಗವಾಗಿದ್ದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಕೈ ಬಿಟ್ಟಿತ್ತು. ಇದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿತ್ತು. ಹೀಗೆ ರಿಲೀಸ್ ಮಾಡಲಾದ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಪಂಜಾಬ್ ತಂಡವು ದುಬಾರಿ ಹಣ ಕೊಟ್ಟು ಖರೀದಿ ಮಾಡಿತ್ತು.
2021ರಿಂದ 2023ರವರೆಗೆ ಆರ್ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್ವೆಲ್ 513, 2022ರಲ್ಲಿ 301, 2023ರಕ್ಕು 400 ರನ್ ಬಾರಿಸಿದ್ದರು. ಆದರೆ 2024ರಲ್ಲಿ ಕೇವಲ 52 ರನ್ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್ಸಿಬಿ ಮ್ಯಾನೇಜ್ಮೆಂಟ್ನ ಕೆಂಗಣ್ಣಿಗೆ ಗುರಿಯಾಗಿದ್ರು. ಹೀಗಾಗಿ ಅವರನ್ನು ಕೈ ಬಿಡಲಾಗಿತ್ತು.
ಅದರಂತೆ RCB ತೊರೆದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಇದೀಗ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ. ಹೌದು, ಕೊಲ್ಕತ್ತಾ ತಂಡ ತೊರೆದು ಪಂಜಾಬ್ ಪಾಲಾಗಿರುವ ಶ್ರೇಯಸ್ ಅಯ್ಯರ್ ಅವರು, 2025ರ ಮೊದಲಾರ್ಧ ಐಪಿಎಲ್ ಸೀಸನ್ಗೆ ಲಭ್ಯರಿಲ್ಲ ಎಂಬುವ ವರದಿಯಾಗಿದೆ. ಹಾಗಾಗಿ ತಂಡದಲ್ಲಿರುವ ಅನುಭವಿ ಆಟಗಾರ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ಗೆ ಪಂಜಾಬ್ ಕಿಂಗ್ಸ್ ತಂಡ ನಾಯಕತ್ವ ಪಟ್ಟ ಕಟ್ಟೋ ಸಾಧ್ಯತೆ ಇದೆ. ಮುಖ್ಯ ಕೋಚ್ ರಿಕಿ ಪಾಂಟಿಂಗ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಇದೆ. ಹೀಗಾಗಿ RCB ಮಾಜಿ ಆಟಗಾರನಿಗೆ ಅದೃಷ್ಟ ಖುಲಾಯಿಸಿತು ಎಂದು ಕ್ರಿಕೆಟ್ ಪ್ರಿಯರು ಕಾಮೆಂಟ್ ಮಾಡುತ್ತಿದ್ದಾರೆ.