HomeEntertainmentಮೇ. 1ರಂದು ತೆರೆಗೆ ಬರಲಿದ್ದಾನೆ `ಪಪ್ಪಿ’

ಮೇ. 1ರಂದು ತೆರೆಗೆ ಬರಲಿದ್ದಾನೆ `ಪಪ್ಪಿ’

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಹೊಂದಿರುವ `ಪಪ್ಪಿ’ ಚಲನಚಿತ್ರವು ಇದೇ ಮೇ. 1ರಂದು ನಗರದ ಕೃಷ್ಣ ಟಾಕೀಸ್ ಸೇರಿದಂತೆ ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಆಯುಷ್ ಮಲ್ಲಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರದಲ್ಲಿ ಬಾಲನಟರಾದ ಕೊಪ್ಪಳ ಜಿಲ್ಲೆಯ ಹಾಲವರ್ತಿ ಗ್ರಾಮದ ಜಗದೀಶ, ಸಿಂದನೂರಿನ ಆದಿತ್ಯ ಸೇರಿದಂತೆ ರೇಣುಕಾ ದೇಸಾಯಿ, ದುರಗಪ್ಪ ಕಾಂಬಳೆ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ಭಾಷೆಯ ಚಲನಚಿತ್ರವನ್ನು ಜಗತ್ತಿಗೆ ತೋರಿಸಬೇಕು ಮತ್ತು ಬೆಂಗಳೂರಿಗೆ ವಲಸೆ ಹೋಗಿ ಜೀವನ ನಡೆಸುವ ಕುಟುಂಬ ಮತ್ತು ಶ್ರೀಮಂತರ ಮನೆಯಲ್ಲಿ ಬೆಳೆದ ನಾಯಿಯ ಜೊತೆಗಿನ ಪ್ರೀತಿ-ವಾತ್ಸಲ್ಯದ ಜೀವನ ಹಂದರ ಹೊಂದಿರುವ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಖ್ಯಾತ ನಟರಾದ ದೃವ ಸರ್ಜಾ ಹಾಗೂ ರಮ್ಯಾ ಸೇರಿದಂತೆ ತೆಲುಗಿನ ರಾಣಾ ದಗಪಟಿ ಅವರು ಚಿತ್ರದ ಟ್ರೇಲರ್‌ನ್ನು ಪ್ರಶಂಸಿಸಿದ್ದಾರೆ ಎಂದರು.

ಈ ಚಿತ್ರವನ್ನು ಬೆಂಗಳೂರು, ಗದಗ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕದ ಕಲಾವಿದರಿಂದ ನಿರ್ಮಾಣವಾದ ಈ ಚಿತ್ರವನ್ನು ಎಲ್ಲರೂ ಪ್ರೋತ್ಸಾಹಿಸಿ ಬೆಂಬಲಿಸಬೇಕೆAದು ನಿರ್ಮಾಪಕ ಆಯುಷ್ ಮಲ್ಲಿ ವಿನಂತಿಸಿದರು.

ಇದೇ ಸಂದರ್ಭದಲ್ಲಿ ಬಾಲನಟರಾದ ಜಗದೀಶ ಮತ್ತು ಆದಿತ್ಯ ಮಾತನಾಡಿ, ರೀಲ್ಸ್ಗಳನ್ನು ಮಾಡುತ್ತಿದ್ದ ನಮಗೆ ಮೊದಲ ಬಾರಿಗೆ ಅವಕಾಶ ನೀಡಿ ನಮ್ಮ ಪ್ರತಿಭೆಯನ್ನು ಗುರುತಿಸಿದ `ಪಪ್ಪಿ’ ಚಿತ್ರತಂಡಕ್ಕೆ ಅಭಿನಂಧನೆಗಳು. ಎಲ್ಲರೂ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರವನ್ನು ನೋಡಿ ನಮಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!