ಪುರಾಣಗಳು ಮನುಷ್ಯನ ಬದುಕನ್ನು ಹಸನು ಮಾಡುವುದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ತಿಳಿಸುತ್ತವೆ: ಮಲ್ಲಿಕಾರ್ಜುನ ಶ್ರೀಗಳು

0
????????????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವೀರಶೈವ ಪರಂಪರೆಯಲ್ಲಿ ಪುರಾಣಗಳಿಗೆ ಮಹತ್ವವಿದೆ. ಈ ಪುರಾಣಗಳು ಮನುಷ್ಯನ ಬದುಕನ್ನು ಹಸನು ಮಾಡುವುದರ ಜೊತೆಗೆ ಅಂದಿನ ಕಾಲಘಟ್ಟದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ತಿಳಿಸುತ್ತವೆ. ಅಷ್ಟು ವರ್ಷಗಳ ಹಿಂದಿನ ದಿನಮಾನಗಳಿಗೆ ನಮ್ಮನ್ನು ಕೊಂಡೊಯ್ದು ಆ ದಿನಗಳನ್ನು ನಮಗೆ ಪರಿಚಯಿಸುತ್ತವೆ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಹಿರೇಮಠ ಜಾತ್ರಾಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ತೆಲುಗಿನಲ್ಲಿ ಪಾಲ್ಕುರಿಕೆ ಸೋಮನಾಥ ಬರೆದ ಬಸವ ಪುರಾಣ ವೀರಶೈವ ಪರಂಪರೆಯ ಮೊದಲ ಪುರಾಣವಾಗಿದ್ದು, ಕನ್ನಡದಲ್ಲಿ ವೀರಶೈವ ಪರಂಪರೆಯ ಪುರಾಣವನ್ನು ಬರೆದವರು ಭೀಮ ಕವಿ. ಅವರು ಬರೆದ ಬಸವ ಪುರಾಣವೇ ಕನ್ನಡದ ಮೊದಲ ಪುರಾಣವಾಗಿದೆ. ಪುರಾಣವನ್ನು ಆಲಿಸುವ ಮೂಲಕ ಇಂದಿನ ನಮ್ಮ ಜೀವನ ಶೈಲಿಯನ್ನು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಅಂದಿನವರ ಚರಿತ್ರೆ ನಮಗೆ ಇಂದಿಗೂ ಮಾರ್ಗದರ್ಶಕ ಎಂದರು.

ನಾವೀಗ ನಿತ್ಯವೂ ಕೇಳುತ್ತಿರುವ ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣದಲ್ಲಿ ಬರುವ ಶ್ರೀ ಕುಮಾರೇಶ್ವರರು ಸಿದ್ಧಾಂತ ಶಿಖಾಮಣಿಯಲ್ಲಿನ ಅನೇಕ ಸಂಗತಿಗಳಿಗೆ ಪೂರಕವಾಗಿ ತಮ್ಮ ಜೀವನವನ್ನು ಸಾಗಿಸಿದರು. ಅದಕ್ಕಾಗಿ ಎಲ್ಲರೂ ಯೋಗ ಜೀವನದ ಬಗ್ಗೆ ಸಾರುವ ಸಿದ್ಧಾಂತ ಶಿಖಾಮಣಿ ಗ್ರಂಥದ ಅಧ್ಯಯನವನ್ನು ಮಾಡಬೇಕೆಂದು ಶ್ರೀಗಳು ತಿಳಿಸಿದರು.

ಕುಮಾರೇಶ್ವರರ ಪುರಾಣ ಪ್ರಾರಂಭಿಸಿದ ಪಂ. ಅನ್ನದಾನ ಶಾಸ್ತಿçಗಳು ಮಾತನಾಡಿ, ಮನಸ್ಸಿಗೆ ಆಗಿರುವ ನೋವುಗಳನ್ನು ಮಠಗಳು ಶಮನ ಮಾಡುತ್ತವೆ. ಹಾನಗಲ್ಲ ಗುರು ಕುಮಾರೇಶ್ವರರು ಮಠಗಳನ್ನು ಕಟ್ಟದಿದ್ದರೂ, ಮಠಗಳಿಗೆ ಯೋಗ್ಯರಾದ ಪೀಠಾಧೀಶರನ್ನು ತಯಾರು ಮಾಡುವ ಶಿವಯೋಗಮಂದಿರವನ್ನು ನಿರ್ಮಿಸಿ ನಾಡಿನ ಹಿತವನ್ನು ಬಯಸಿದರು. ನಮ್ಮ ಮನದಲ್ಲಿಯೆ ಮಹಾದೇವನಿದ್ದಾನೆ. ಮನಸ್ಸಿನಲ್ಲಿರುವ ವಿಷಯ ಎಂಬ ಧೂಳನ್ನು ಅತ್ತ ಸರಿಸಿದರೆ ಮಹಾದೇವ ನಮ್ಮ ಅಂತರAಗಕ್ಕೆ ನಿಚ್ಚಳವಾಗಿ ಕಾಣುತ್ತಾನೆ. ಶ್ರೀ ಕುಮಾರೇಶ್ವರರು ಅಂತಹ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದು, ಸಮಾಜ ಸೇವೆ ಮತ್ತು ಸಂಘಟನೆಯ ಮೂಲಕವೆ ಈ ಸಮಾಜಕ್ಕೆ ಬೆಳಕಾದರು ಎಂದರು. ಈಶ್ವರ ಬೆಟಗೇರಿ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here