ಪುರಂದರ ಮಂಟಪ ಶ್ರೀ ರಾಘವೇಂದ್ರಮಠ ಸಾಕ್ಷ್ಯಚಿತ್ರ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಧಾರವಾಡದ ಪುರಂದರ ಮಂಟಪದ ಶ್ರೀ ರಾಘವೇಂದ್ರ ಮಠದ ಕುರಿತು ವಿದ್ಯಾ ವಿನಾಯಕ ಟ್ರಸ್ಟ್ ನಿರ್ಮಾಣದ ಶ್ರೀ ಸಿದ್ಧಿವಿನಾಯಕ ಕಂಬೈನ್ಸ್‍ರವರ ಪುರಂದರ ಮಂಟಪ ಶ್ರೀ ರಾಘವೇಂದ್ರಮಠ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು.

Advertisement

ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯ ಪುರಂದರ ಮಂಟಪದಲ್ಲಿ ಮಠದ ಧರ್ಮದರ್ಶಿ, ಮೇಲ್ವಿಚಾರಕರಾದ ಸಿ. ನಾಗರಾಜ ಬಿಡುಗಡೆ ಮಾಡಿದರು. ಪಂಡಿತ ಜಿ.ವಿ ನವಲಗುಂದ, ಮಠಾಧಿಕಾರಿಗಳಾದ ಪಂಡಿತ ಬಂಡಾಚಾರ್ಯ ಗಿಡದ ಹುಬ್ಬಳ್ಳಿ, ಡಾ. ಪ್ರಲ್ಹಾದ ಛಬ್ಬಿ, ಎನ್.ಡಿ. ಕುಲಕರ್ಣಿ, ಜೋಶಿ, ವಿಜಯ ವಿಠಲಾಚಾರ್ಯ, ಬಸವರಾಜ ಹೂಗಾರ, ಅರವಿಂದ ನಾಗಜ್ಜನವರ, ಮುಜುಮದಾರ, ಸಿ. ವೇದವತಿ, ರತ್ನ ಜೋಶಿ, ಪದ್ಮ ನವಲಗುಂದ, ಹರಿಪ್ರಿಯ, ಶ್ರೀನಿವಾಸ, ಗುರುರಾಜ ದಂಪತಿಗಳು, ರಮೇಶ್, ಸಚಿನ್ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಈ ಸಾಕ್ಷ್ಯಚಿತ್ರಕ್ಕೆ ಸಾಹಿತ್ಯ ಶ್ರೀ ಜೋಶಿ, ಛಾಯಾಗ್ರಹಣ ವಿನಾಯಕ ಬಸವಾ, ಸಂಗೀತ ರಜತ ಬಸವಾ, ಸ್ತುತಿ ಆಶಾ ಆಚಾರ್ಯ, ಸಂಕಲನ ಸಿದ್ಧಾರ್ಥ್ ಜಾಲಿಹಾಳ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಡಿಸೈನ್ ನಟರಾಜ ಪತ್ತಾರ, ಸಹಕಾರ ಡಾ. ಕಲ್ಮೇಶ್ ಹಾವೇರಿಪೇಟ್, ಕಿಶನರಾವ್ ಎಂ. ಕುಲಕರ್ಣಿ, ಎನ್.ಎಸ್. ಪಾಟೀಲ, ಪ್ರಮೋದ್ ಜೋಶಿ, ಲತಾ ಎಂ. ಜೋಶಿ, ಕೀರ್ತಿ ಅರವಿಂದ, ನಿರ್ವಹಣೆ ಆನಂದ ಜೋಶಿ, ರಘು ತುಮಕೂರು ಅವರದ್ದು, ಕಿರುಚಿತ್ರ, ಚಲನಚಿತ್ರಗಳ ನಿರ್ದೇಶಕ ಅರವಿಂದ ಮುಳಗುಂದ ನಿರ್ದೇಶನ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here