ಡಂಬಳ: ಗದಗ ಜಿಲ್ಲೆಯ ಸ್ಥಳೀಯ ಪ್ರತಿಷ್ಠಿತ ಕೆ ವಿ ಎಸ್ ಆರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಗದಗ ಜಿಲ್ಲಾ ಘಟಕದ ಖಜಾಂಚಿಗಳಾದ ಶ್ರೀಮತಿ ಪುಷ್ಪಾವತಿ ಬಸವರಾಜ್ ಬಳ್ಳಾರಿ ಅವರಿಗೆ ತಮಿಳುನಾಡಿನ ಏಷಿಯಾ ಇಂಟರ್ ನ್ಯಾಷನಲ್ ಕಲ್ಲರ್ ರಿಸರ್ಚ್ ಯೂನಿವರ್ಸಿಟಿ ಹಾಗೂ ಏಷ್ಯಾ ಇಂಟರ್ ನ್ಯಾಶನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ರೂವಾರಿಗಳಾಗಿ ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಪರಿಗಣಿಸಿ 2025ನೇ ಸಾಲಿನಲ್ಲಿ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಹೊಸೂರು ಕ್ಲಾರೆಸ್ಪಾ ಸಾಂಸ್ಕೃತಿಕ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.
ಗದಗ ಜಿಲ್ಲೆಯ ಶಿಕ್ಷಕರು, ನೌಕರರ ಸಂಘದ ಸದಸ್ಯರು, ಡಂಬಳ, ಹಿರೇವಡ್ಡಟ್ಟಿ ಸೇರಿದಂತೆ ವಿವಿಧ ಗ್ರಾಮದ ವಿದ್ಯಾರ್ಥಿಗಳು, ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.