ತೊಡೆಯ ಮೇಲೆ ಲ್ಯಾಪ್ಟಾಪ್ ಇಟ್ಟು ವರ್ಕ್ ಮಾಡ್ತೀರಾ!? ಹುಷಾರ್, ಅಪಾಯ ಕಟ್ಟಿಟ್ಟ ಬುತ್ತಿ!

0
Spread the love

ಕೊರೊನಾ ಬಂದ ಬಳಿಕ ಹೆಚ್ಚಿನ ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ ಪರಿಣಾಮವಾಗಿ ಅವರು ಲ್ಯಾಪ್ ಟಾಪ್ ನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದು ಕಂಡುಬರುತ್ತಲಿದೆ. ಕೇವಲ ಮನೆ ಮಾತ್ರವಲ್ಲದೆ, ಈಗ ನಿಧಾನವಾಗಿ ಆರಂಭವಾಗುತ್ತಿರುವ ಕಚೇರಿಗೆ ಹೋದರೂ ಅಲ್ಲಿ ಕೆಲವರು ತಮ್ಮ ತೊಡೆಯ ಮೇಲೆಯೇ ಲ್ಯಾಪ್ ಟಾಪ್ ನ್ನು ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡಿರುವರು.

Advertisement

ಆದರೆ ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯವಿದೆ. ದೀರ್ಘಕಾಲದವರೆಗೆ ನಿಮ್ಮ ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಬಂಜೆತನದ ಸಮಸ್ಯೆ ಉಲ್ಬಣಗೊಳಿಸಬಹುದು. ಹೌದು ಇದರ ಬಗ್ಗೆ ನೀವು ಎಚ್ಚರ ವಹಿಸಲೇಬೇಕು. ಇಲ್ಲಿದೆ ಆ ಕುರಿತು ಹೆಚ್ಚಿನ ಮಾಹಿತಿ. ಅವುಗಳನ್ನು ತಿಳಿದುಕೊಳ್ಳಿ.

ಪುರುಷರಲ್ಲಿ ಫರ್ಟಿಲಿಟಿ ಸಮಸ್ಯೆ:-

ಲ್ಯಾಪ್ ಟಾಪ್ ಗಳನ್ನು ತಮ್ಮ ತೊಡೆಯ ಮೇಲೆ ಹಿಡಿದುಕೊಂಡು ಕೆಲಸ ಮಾಡುವ ಅಭ್ಯಾಸವು ಪುರುಷರಲ್ಲಿ ಊಹಿಸಬಹುದಾದ ಇನ್ಫರ್ಟಿಲಿಟಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಇದು ಪುರುಷರ ನ್ಯೂರೋಡಾಕ್ಟ್ ಅಂಗದ ಮೇಲೆ ಪರಿಣಾಮ ಬೀರುತ್ತದೆ, ಇದು ಅವರ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುತ್ತದೆ.

ಇದಲ್ಲದೆ, ನಿಮ್ಮ ತೊಡೆಯ ಮೇಲೆ ಲ್ಯಾಪ್ ಟಾಪ್ ನೊಂದಿಗೆ ದೀರ್ಘಕಾಲದವರೆಗೆ ಕೆಲಸ ಮಾಡುವುದರಿಂದ ಪಾದಗಳ ಚರ್ಮವು ವಿವರ್ಣಗೊಳ್ಳುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಉಂಟುಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸಿವೆ.

ಪುರುಷರಿಗೆ ಹೆಚ್ಚು ಅಪಾಯಕಾರಿ:
ಲ್ಯಾಪ್‌ಟಾಪ್ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚು ಹಾನಿಕರ. ಏಕೆಂದರೆ ಮಹಿಳೆಯರಲ್ಲಿ ಗರ್ಭಾಶಯವು ದೇಹದ ಒಳಗೆ ಇರುತ್ತದೆ. ಪುರುಷರ ಜನನಾಂಗ ಹೊರಗಡೆ ಇರುವುದರಿಂದ ಶಾಖ ವಿಕಿರಣವು ನೇರವಾಗಿ ಪುರುಷರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.

ತಜ್ಞರ ಪ್ರಕಾರ, ತೊಡೆಯ ಮೇಲೆ ಲ್ಯಾಪ್ ಟಾಪ್ ಅನ್ನು ಇಟ್ಟುಕೊಂಡು ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ವೃಷಣಗಳ ತಾಪಮಾನವನ್ನು ಹೆಚ್ಚಿಸುತ್ತದೆ. ಏಕೆಂದರೆ ಲ್ಯಾಪ್ ಟಾಪ್ ಬೆಳಕಿನ ಕಂಪನಗಳನ್ನು ಸೃಷ್ಟಿಸುತ್ತದೆ, ಅದು ಫಲವತ್ತತೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಲ್ಯಾಪ್ ಟಾಪ್ ಅನ್ನು ಮೇಜಿನ ಮೇಲೆ ಇರಿಸಿ ಅದನ್ನು ಉಪಯೋಗಿಸುವುದು ಯಾವಾಗಲೂ ಒಳ್ಳೆಯದು ಎನ್ನುತ್ತಾರೆ.


Spread the love

LEAVE A REPLY

Please enter your comment!
Please enter your name here