ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಡಾ. ಪ್ರಕಾಶ ಗುಂಡೂರ ಹೇಳಿದರು.
ಅವರು ಸೋಮವಾರ ಗದಗ ತಾಲೂಕಿನ ಮುಳಗುಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ (ಆರ್.ಎಂ.ಎಸ್.ಎ) ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಕಲಿಕೆಯ ದಿನಗಳಲ್ಲಿ ಕಲಿಯುವದನ್ನು ಮಾತ್ರ ಮಾಡಬೇಕು. ಶ್ರದ್ಧೆ ಮತ್ತು ನಿಷ್ಠೆಯಿಂದ ಅಭ್ಯಾಸ ಮಾಡಿದಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಿದೆ. ಇಂದು ಇಲ್ಲಿ ಪ್ರತಿಭಾ ಪುರಸ್ಕಾರ ಪಡೆದವರು ಬರಲಿರುವ ದಿನಗಳಲ್ಲಿ ತಾವೂ ಈ ರೀತಿಯ ಪ್ರತಿಭಾ ಪುರಸ್ಕಾರ ನೀಡುವಂತಾಗಲಿ ಎಂದರು.
ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅವರು ಪ್ರತಿಷ್ಠಾನ ಧ್ಯೇಯೋದ್ದೇಶಗಳನ್ನು ವಿವರಿಸಿ ವಿದ್ಯಾರ್ಥಿಗಳು ಪ್ರತಿಷ್ಠಾನದ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎಚ್. ಪೂಜಾರ ವಹಿಸಿದ್ದರು. ವೇದಿಕೆಯ ಮೇಲೆ ಪ್ರತಿಷ್ಠಾನದ ಪದಾಧಿಕಾರಿಗಳಾದ ಶಿವಾನಂದ ಕತ್ತಿ, ಸುಭಾಸ ಬೆಟದೂರ, ಎಸ್.ಜಿ. ಫಿರಂಗಿ, ನೇಹಾ, ಸುಧಾರಾಣಿ, ವೀರೇಶ ಗಂಜಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರೇಣುಕಾ ಕಮ್ಮಾರ, ಹರೀಶ ಕೆಂಚನಾಯ್ಕರ್, ಇಕ್ಬಾಲ್ ಯಳವತ್ತಿ, ದೀಪಾ ಇಡಗುರಿ, ರಜಿಯಾ ಮುಂದಿನಮನಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ವ್ಹಿ. ತಿಮ್ಮಾಪೂರ ಸ್ವಾಗತಿಸಿ ಪರಿಚಯಿಸಿದರು. ಜಿ.ಐ. ಪಾಟೀಲ ನಿರೂಪಿಸಿದರು. ವ್ಹಿ.ಟಿ. ಅಂಗಡಿ ವಂದಿಸಿದರು.
ಉರ್ದು ಪ್ರೌಢಶಾಲೆ: ಮುಳಗುಂದ ಪಟ್ಟಣದ ಅಂಜುಮನ್ ಇ-ಇಸ್ಲಾಂ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶಫಾ ಲಾಡಸಾಬನವರ, ಮೆಹಬೂಭೀ ಶೇಖ, ಬೀಬಿಫಾತೀಮಾ ಕರ್ನಾಚಿ, ತೇಹರಿನ್ ಅಜಂಖಾನವರ, ಸೀಮಾ ಮುಲ್ಲಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಧ್ಯಕ್ಷತೆಯನ್ನು ಡಾ. ಅಂಜನಾ ತಳಗೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ಅಧ್ಯಕ್ಷ ಹಮೀದ್ ಮುಜಾವರ ಆಗಮಿಸಿದ್ದರು. ವೇದಿಕೆಯ ಮೇಲೆ ಪ್ರತಿಷ್ಠಾನದ ಪದಾಧಿಕಾರಿಗಳಾದ ಶಿವಕುಮಾರ ಪಾಟೀಲ, ಶಿವಾನಂದ ಕತ್ತಿ, ಸುಭಾಸ ಬೆಟದೂರ, ಜಿ.ಎಂ. ಫಿರಂಗಿ, ನೇಹಾ ಉಪಸ್ಥಿತರಿದ್ದರು.
ಮೊರಾರ್ಜಿ ವಸತಿ ಶಾಲೆ: ಮುಳಗುಂದದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಯುಕ್ತಾ ಪಾಟೀಲ, ಉಮೇಶ ಭೂಮಣ್ಣವರ, ಕಾವ್ಯ ಕಾರಬಾರಿ, ರೇಖಾ ಲಮಾಣಿ, ಪುಷ್ಪಾ ದೊಡ್ಡಮನಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಧ್ಯಕ್ಷತೆಯನ್ನು ಜಿ.ಎಂ. ಪಿಡ್ಡನಗೌಡ್ರ ವಹಿಸಿದ್ದರು. ಎಸ್.ಜಿ. ಸತಾರ, ಅಕ್ಷತಾ ಉಪ್ಪಾರ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಣವಿ ಗ್ರಾಮದಲ್ಲಿ
ಕಣವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರ ಬೋಳನವರ, ಲಕ್ಷ್ಮೀ ಗಾರವಾಡ, ರಂಜಿತಾ ಕಣವಿ, ಸುನೀತಾ ತೋಳನವರ, ಅಶ್ವಿನಿ ರಣತೂರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಕಾಂತಗೌಡ್ರ ಪಾಟೀಲ, ಮುತ್ತು ವೆಂಕಟಾಪೂರ, ಆರ್.ಎಸ್. ತೋಳನವರ, ಎಂ.ಎಚ್. ಗಳೇದ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಎಸ್.ಐ. ಬಡಿಗೇರ ವಹಿಸಿದ್ದರು. ಸಮಾರಂಭದಲ್ಲಿ ಜಿ.ಎನ್. ಮುದ್ದಿಕೋಲ, ಎಸ್.ಜಿ. ಮೂಲಿಮನಿ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಜಿ. ಮೂಲಿಮನಿ ಸ್ವಾಗತಿಸಿದರು, ಕಳಕಪ್ಪ ಕುರ್ತಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.