ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದಲ್ಲಿ ಎಂದಿಗೂ ಮುಂದೆಯೇ ಇವೆ ಎಂದು ಸಂಜಯ ನೀಲಗುಂದ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ (ಡಿಪಿಇಪಿ)ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮ ಮಾತೃಭಾಷೆ ಕನ್ನಡ. ಆ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಶಾಲೆಗಳ ಪಾತ್ರ ಬಹು ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪಾಲಕರ -ಸಹಕಾರ ತುಂಬಾ ಅಗತ್ಯವಾಗಿದೆ. ಮಕ್ಕಳು ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಗತ್ಯವಿದೆ ಎಂದರು.
ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಾಹಾಂತೇಶ ಕೆಂಚನಾಯ್ಕರ್ ವಹಿಸಿದ್ದರು. ಪ.ಪಂ ಸದಸ್ಯ ಮಾಹಾಂತೇಶ ನೀಲಗುಂದ, ಮಹಾದೇವಪ್ಪಾ ಗಡಾದ, ಎ.ಎಚ್. ದುರ್ಗಿಗುಡಿ, ಎನ್.ಎಸ್. ಕರಿಗೂಳಪ್ಪನವರ, ಜೆ.ಜಿ. ಈರಗಾರ, ಹನುಮಂತಪ್ಪ ಹಗ್ಗದ, ಮಾಹಾಂತೇಶ ಬಳ್ಳಾರಿ, ಮಾಹಾದೇವಪ್ಪಾ ವಿಜಾಪೂರ, ಗಂಗಪ್ಪಾ ಸುಂಕಾಪೂರ, ಮಹೇಶ ನೀಲಗುಂದ ಮುಂತಾದವರಿದ್ದರು.