ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಆಗಿರುವ ಅಶ್ವಿನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಬೆನ್ನಲ್ಲೇ ಅಶ್ವಿನ್ ನಿವೃತ್ತಿ ಘೋಷಣೆ ಮಾಡಿದ್ದಾರೆ. 38 ವರ್ಷದ ಸ್ಪಿನ್ ಮಾಂತ್ರಿಕ ವಿಕೆಟ್ ಉರಳಿಸುವುದರಲ್ಲಿ ಎರಡನೇ ಲೀಡಿಂಗ್ ಬೌಲ್ರ್ ಆಗಿದ್ದರು.
ನವೆಂಬರ್ 6 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಟೆಸ್ಟ್ ಮ್ಯಾಚ್ ಮೂಲಕ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಪದಾರ್ಪಣೆ ಮಾಡಿದ್ದರು.ಒಟ್ಟು 106 ಟೆಸ್ಟ್ ಮ್ಯಾಚ್ಗಳನ್ನು ಆಡಿರುವ ಅಶ್ವಿನ್ ಒಟ್ಟು 537 ವಿಕೆಟ್ಗಳನ್ನು ಕಬಳಿಸಿದ್ದರು.
ಐದು ದಿನದ ಟೆಸ್ಟ್ ಮಾದರಿಯ ಕ್ರಿಕೆಟ್ನಲ್ಲಿ ಕುಂಬ್ಳೆ ಈ ಹಿಂದೆ 619 ವಿಕೆಟ್ಗಳನ್ನು ಉರುಳಿಸಿ ಸಾಧನೆ ಮಾಡಿದ್ದರು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಸಿಸಿಐ, “ತಮಿಳುನಾಡಿನ ಶ್ರೇಷ್ಠ ಆಲ್ ರೌಂಡರ್ ಆರ್. ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಪ್ರಕಟಿಸಿದ್ದಾರೆ” ಎಂದು ಟ್ವೀಟ್ ಮಾಡಿದೆ.



