ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ WPL ಪಂದ್ಯದಲ್ಲಿ ಡೆಲ್ಲಿ ವಿರುದ್ಧ RCB ಹೀನಾಯವಾಗಿ ಸೋತಿದೆ. ಈ ಮೂಲಕ ತವರಲ್ಲಿ ಆಡಿದ ನಾಲ್ಕು ಪಂದ್ಯದಲ್ಲೂ ಸೋಲುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ, ಡೆಲ್ಲಿಗೆ 148 ರನ್ ಗಳ ಗುರಿಯನ್ನು ನೀಡಿತ್ತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 15.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 151 ರನ್ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ.
ಆರಂಭಿಕ ಆಟಗಾರ್ತಿಯಾಗಿ ಬಂದ ಮೆಗ್ ಲ್ಯಾನಿಂಗ್ 12 ಎಸೆತಗಳಲ್ಲಿ 2 ರನ್‌ಗೆ ಔಟಾದರು. ಎರಡನೇ ಕ್ರಮಾಂಕದಲ್ಲಿ ಬಂದ ಜೆಸ್ ಜೊನಾಸ್ಸೆನ್ ಹಾಗೂ ಶೆಫಾಲಿ ವರ್ಮಾ ಜೊತೆಗೂಡಿ 132 ರನ್ ನೀಡುವ ಮೂಲಕ ಗೆಲುವಿಗೆ ನೆರವಾದರು. ಜೆಸ್ ಜೊನಾಸ್ಸೆನ್ 38 ಎಸೆಗಳಲ್ಲಿ 9 ಬೌಂಡರಿ, 1 ಸಿಕ್ಸ್ ಬಾರಿಸಿ 61 ರನ್ ಹಾಗೂ ಶೆಫಾಲಿ ವರ್ಮಾ 43 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸ್ ಬಾರಿಸುವ ಮೂಲಕ 80 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಸ್ಮೃತಿ ಮಂಧಾನ 8 ರನ್ ಗಳಿಗೆ ಔಟ್ ಆಗಿ ಆರಂಭದಲ್ಲಿ ನಿರಾಸೆ ಮೂಡಿಸಿದರು. ಎರಡನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾನಿ ವ್ಯಾಟ್ 18 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಮೊದಲ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಪೆರ್ರಿ, ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಶನಿವಾರ ಮತ್ತೆ ಫಾರ್ಮ್‌ಗೆ ಬಂದ ಪೆರ್ರಿ ಭರ್ಜರಿ 3 ಸಿಕ್ಸ್, 3 ಬೌಂಡರಿ ಬಾರಿಸಿ 47 ಎಸೆತಗಳಲ್ಲಿ 60 ರನ್‌ಗಳಿಸಿದರು. ಪೆರ್ರಿಗೆ ಜೊತೆಯಾದ ರಾಘ್ವಿ ಬಿಸ್ಟ್
32 ಎಸೆತಗಳಲ್ಲಿ 33 ರನ್ ಗಳಿಸಿದರು. ಇನ್ನುಳಿದಂತೆ ರಿಚಾ ಘೋಷ್ 5, ಕನಿಕಾ ಅಹುಜಾ 2 ಹಾಗೂ ಜಾರ್ಜಿಯಾ 12 ರನ್ ಗಳಿಸಿದರು.
ಆರ್‌ಸಿಬಿ ಪರ ಬೌಲಿಂಗ್ ಮಾಡಿದ ರೇಣುಕಾ ಸಿಂಗ್ 1 ವಿಕೆಟ್ ಪಡೆದರು. ಇನ್ನೂ ಡೆಲ್ಲಿ ಪರ ಬೌಲಿಂಗ್ ಮಾಡಿದ ಶಿಖಾ ಹಾಗೂ ಚರಣಿ ತಲಾ 2 ವಿಕೆಟ್ ಪಡೆದುಕೊಂಡರೆ. ಕಪ್ಪ್ 1 ವಿಕೆಟ್ ಪಡೆದುಕೊಂಡರು.
ಈ ಮೂಲಕ ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲಿನ ಅನುಭವವಾಗಿದೆ. RCB ವಿರುದ್ಧದ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ.