ಸ್ಯಾಂಡಲ್ ವುಡ್ ಕ್ವೀನ್ ನಟಿ ರಚಿತಾ ರಾಮ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ರಜನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ನಟಿಸಿ ಬಂದ ಬಳಿಕ ರಚ್ಚುಗೆ ಮತ್ತಷ್ಟು ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಿನಿಮಾಗಳ ಜೊತೆ ಜೊತೆಗೆ ರಿಯಾಲಿಟಿ ಶೋನಲ್ಲೂ ಬ್ಯುಸಿಯಾಗಿರುವ ನಟಿ ಇದೀಗ ನವರಾತ್ರಿ ಸಂದರ್ಭದಲ್ಲೇ ಗುಡ್ ನ್ಯೂಸ್ ನೀಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಫೋಟೋ ಹಂಚಿಕೊಂಡಿರುವ ರಚಿತಾ ರಾಮ್ ಎಲ್ಲರಿಗೂ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ರಚಿತಾ ರಾಮ್ ಅವರಿಗೆ ಬಹಳ ದಿನಗಳಿಂದಲೂ ಒಂದು ಆಸೆ ಇತ್ತಂತೆ. ಆ ಆಸೆಯನ್ನೂ ಇದೀಗ ನಟಿ ನನಸು ಮಾಡಿಕೊಂಡಿದ್ದಾರೆ. ಅಂದ ಹಾಗೆ ರಚ್ಚು ಹಾಕಿರೋ ಫೋಟೋ ನೋಡಿ ಹಲವರು ಮದುವೆ ಸುದ್ದಿ ಇರಬಹುದು ಎಂದುಕೊಂಡಿದ್ದರು. ಆದರೆ ರಚಿತಾ ರಾಮ್ ಅವರಿಗೆ ತುಂಬ ವರ್ಷಗಳಿಂದಲೂ ಮೂಗು ಚುಚ್ಚಿಸಿಕೊಳ್ಳುವ ಆಸೆ ಇದ್ದು ಅದನ್ನ ಈಗ ನನಸು ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೋಟೋದೊಂದಿಗೆ ಬರೆದುಕೊಂಡಿರುವ ರಚಿತಾ ರಾಮ್, “ನನಗೆ ಮೂಗು ಚುಚ್ಚಿಸಿಕೊಳ್ಳಬೇಕು ಎನ್ನುವ ಆಸೆ ಬಹಳ ದಿನಗಳಿಂದ ಇತ್ತು. ಈ ವಿಶೇಷ ದಿನದಂದು ಅದು ಸಾಧ್ಯವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದು ಬರೆದುಕೊಂಡಿದ್ದು ಮೂಗುತಿಯಲ್ಲಿ ರಚಿತಾ ಮತ್ತಷ್ಟು ಕ್ಯೂಟ್ ಆಗಿ ಕಾಣಿಸಿಕೊ೦ಡಿದ್ದಾರೆ.
ರಚಿತಾ ರಾಮ್ ಮೂಗುತಿ ಫೋಟೋ ಶೇರ್ ಮಾಡಿದ್ದೇ ತಡ ಅವರ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. ಮೂಗು ಚುಚ್ಚಿಸಿಕೊಂಡ ಹಿನ್ನೆಲೆ ರಚಿತಾ ಮದುವೆ ಆಗ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ.