Breaking: ಸಿಕ್ಕ ಸಿಕ್ಕವರಿಗೆ ರಾಡು, ಡ್ರ್ಯಾಗರ್ ನಿಂದ ಚುಚ್ಚಿ ವ್ಯಕ್ತಿ ರಂಪಾಟ!

0
Spread the love

ಚಿಕ್ಕಮಗಳೂರು:- ವ್ಯಕ್ತಿಯೋರ್ವ ರಾಡು, ಡ್ರ್ಯಾಗರ್ ನಿಂದ ಸಿಕ್ಕ ಸಿಕ್ಕವರಿಗೆ ಚುಚ್ಚಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಬೇಲೂರು -ಹಿರೇಮಗಳೂರು ರಸ್ತೆಯಲ್ಲಿ ಜರುಗಿದೆ. ಎಣ್ಣೆ, ಗಾಂಜಾ ಮತ್ತಿನಲ್ಲಿ ಸಿಕ್ಕಸಿಕ್ಕ ವರಿಗೆ ಚಾಕು ಹಾಕಲು ವ್ಯಕ್ತಿ ಮುಂದಾಗಿದ್ದಾನೆ.

Advertisement

ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರ ಮೇಲು ಚಾಕು ಹಾಗೂ ರಾಡಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ವ್ಯಕ್ತಿಯ ರಂಪಾಟಕ್ಕೆ ಪೊಲೀಸರೇ ಅಸಹಾಯಕರಾಗಿ ನಿಂತಿದ್ದರು. ಸಗಣಿಪುರದ ನಿವಾಸಿ ಕಿರಿಕ್ ಕೌಶಿಕ್ ಎಂಬಾತನಿಂದ ರಂಪಾಟ ನಡೆದಿದೆ ಎನ್ನಲಾಗಿದೆ.

ಘಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ‌ ರಸ್ತೆಯಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಕೌಶಿಕ್ ‌ ರಂಪಾಟಕ್ಕೆ ಪೊಲೀಸರೇ ‌ ದಂಗಾಗಿದ್ದು, ವಶಕ್ಕೆ ಪಡೆಯಲು ಬಂದ ಎಎಸ್ಐ ಕುಮಾರಸ್ವಾಮಿ ವಿರುದ್ಧವೇ ‌ ಆರೋಪಿ ದಾಳಿ ಮಾಡಿ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಕೆಲ ಕಾಲ ಹೆದ್ದಾರಿಯಲ್ಲಿ ಜನತೆ ಗಾಬರಿಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here