ಗದಗ:- ಗದಗ ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಗದಗ ನಗರದ ಪಾಪ್ಯುಲರ್ ಬಾರ್ ನಲ್ಲಿ ಜರುಗಿದೆ.
ಕುಡಿಯುತ್ತ ಕುಳಿತಿದ್ದ ವ್ಯಕ್ತಿಯ ಮೇಲೆ ಏಕಾ ಏಕಿ ಜಗ್, ಗ್ಲಾಸ್, ಬಾಟಲ್ ನಿಂದ ಹಲ್ಲೆ ನಡೆಸಿ ಇಬ್ಬರು ಪುಂಡರು ಎಸ್ಕೇಪ್ ಆಗಿದ್ದಾರೆ.
ನಗರದ ಜೀವನ್, ಆಸೀಫ್ ಎಂಬಾತರಿಂದ ಈ ಕೃತ್ಯ ನಡೆದಿದ್ದು, ಘಟನೆಯ ದೃಶ್ಯ ಬಾರ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅದೀಗ ವೈರಲ್ ಆಗಿದೆ.
ಲಿಕ್ಕರ್ ಮಾಲೀಕರು ಅಬಕಾರಿ ನಿಯಮ ಉಲ್ಲಂಘನೆ ಮಾಡಿದ್ರೂ ಅಬಕಾರಿ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಹದಿನೈದು ದಿನಗಳ ಹಿಂದೆ ಕಳಸಾಪೂರ ರಸ್ತೆಯ ರಿಂಗ್ ರೋಡ್ ಬಳಿ ಇರುವ ರಾಜ್ ಕಮಲ್ ವೈನ್ ಶಾಪ್ ನಲ್ಲಿ ಸ್ನ್ಯಾಕ್ಸ್ ವಿಷಯಕ್ಕೆ ಗಲಾಟೆಯಾಗಿತ್ತು.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಲವು ಬಾರ್ ಅಂಗಡಿಗಳು ಅಬಕಾರಿ ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದರೂ ಅದನ್ನು ನಿಲ್ಲಿಸಲು ಅಬಕಾರಿ ಇಲಾಖೆಗೆ ಆಗುತ್ತಿಲ್ಲ ಎನ್ನಲಾಗಿದೆ.
ಘಟನೆ ಸಂಬಂಧ ಶಹರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇದೀಗ ಹಲ್ಲೆಗೊಳಗಾದ ವ್ಯಕ್ತಿಯ ಮಾಹಿತಿ ಹಾಗೂ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.