ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರದ ಶ್ರೀ ಸಾಯಿ ಕನ್ವೆನ್ಷನ್ ಹಾಲ್ ನಲ್ಲಿ ಖ್ಯಾತ ಗಾಯಕಿ ವಾರಿಜ ಶ್ರೀ ಜೊತೆಗೆ ರಘು ದೀಕ್ಷಿತ್ ಸಪ್ತಪದಿ ತುಳಿದಿದ್ದಾರೆ.
50 ವರ್ಷ ವಯಸ್ಸಿನ ರಘು ದೀಕ್ಷಿತ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಹಾಗೂ ಆಪ್ತರ ಸಮ್ಮುಖದಲ್ಲಿ ರಘು ದೀಕ್ಷಿತ್ ಹಾಗೂ ವಾರಿಜಾಶ್ರೀ ಶಾಸ್ತ್ರೋಕ್ತವಾಗಿ ಸತಿ ಪತಿಗಳಾಗಿದ್ದಾರೆ.
ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಈ ಮೊದಲ ಡ್ಯಾನ್ಸರ್ ಮಯೂರಿ ಉಪಾಧ್ಯರನ್ನು ವಿವಾಹವಾಗಿದ್ದರು. ಆದರೇ ರಘು ದೀಕ್ಷಿತ್- ಮಯೂರಿ 2018 ರಲ್ಲಿ ದೂರ ದೂರವಾದರು.ಇದೀಗ ರಘು ದೀಕ್ಷಿತ್ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.



