ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ: ರಾಹುಲ್‌ ಗಾಂಧಿ ಆರೋಪ

0
Spread the love

ನವದೆಹಲಿ: ಮತಗಳ್ಳತನ ಆರೋಪದ ಕುರಿತು ಇಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಪತ್ರಿಕಾಗೊಷ್ಠಿ ನಡೆಸಿದ್ದು, ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದಾರೆ. ಹೌದು ಈ ಹಿಂದೆ ಮಹದೇವಪುರ ಕ್ಷೇತ್ರದಲ್ಲಿ ಕೂಡ ಮತಗಳ್ಳತನವಾಗಿದ್ದ ಕುರಿತು ಮಾಹಿತಿ ನೀಡಿದ್ದರು.

Advertisement

ಇದೀಗ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್​ ಮತದಾರರನ್ನೇ ಟಾರ್ಗೆಟ್ ಮಾಡಲಾಗಿದೆ. ಆದಿವಾಸಿಗಳು, ಒಬಿಸಿ ಒಟ್ಟಿನಲ್ಲಿ ವಿರೋಧಪಕ್ಷಕ್ಕೆ ಮತಹಾಕುವವರ ಹೆರುಗಳನ್ನೇ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಸಿಐಡಿ 18 ತಿಂಗಳಲ್ಲಿ 18 ಪತ್ರ ಬರೆದಿದೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಅವರು ಉತ್ತರ ನೀಡುತ್ತಿಲ್ಲ. CEC of Karnataka ದೆಹಲಿಗೆ ಪತ್ರ ಬರೆದಿದೆ. ಉತ್ತರ ಬಂದಿಲ್ಲ. ಇದು ಬಲವಾದ ಸಾಕ್ಷ್ಯ. ಜ್ಞಾನೇಶ್‌ ಕುಮಾರ್‌ ಯಾರನ್ನೋ ರಕ್ಷಣೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಉತ್ತರ ಗೊತ್ತಿದೆ. ಯಾರವರು ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಇದು ಹೈಡ್ರೋಜನ್‌ ಬಾಂಬಲ್ಲ, ಹೈಡ್ರೋಜನ್‌ ಬಾಂಬ್‌ ಬರಬೇಕಷ್ಟೇ. ಈ ದೇಶದ ಯುವಕರಿಗೆ ಚುನಾವಣೆಗಳಲ್ಲಿ ಹೇಗೆ ಅಕ್ರಮ ನಡೆಯುತ್ತಿದೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here