ಬಿಹಾರ: ಮುಂದಿನ ಲೋಕಸಭಾ ಚುನಾವಣೆ ಬಳಿಕ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಆರ್‌ಜೆಡಿ ನಾಯಕ, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಬಿಹಾರದ ನವಾಡದಲ್ಲಿ ನಡೆದ ‘ಮತದಾರ ಅಧಿಕಾರ್’ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆ ಬಳಿಕ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದರು.
ಬಿಹಾರದ ಜನರನ್ನು ಮೂರ್ಖರನ್ನಾಗಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆಯನ್ನು ರಚಿಸಿಕೊಂಡಿವೆ. ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಳ್ಳಲು ಬಯಸುತ್ತಿದೆ, ನಾವು ಬಿಹಾರಿಗಳು. ಒಬ್ಬ ಬಿಹಾರಿ ಎಲ್ಲರಿಗಿಂತ ಮೇಲು. ನಾವು ಚುನಾವಣೆಗಳನ್ನು ಖೈನಿನಂತೆ (ತಂಬಾಕು ಜಗಿಯುವುದು) ಪರಿಗಣಿಸುತ್ತೇವೆ. ನಾವು ಅದನ್ನು ಉಜ್ಜಿ ಎಸೆಯುತ್ತೇವೆ ಎಂದರು.



