ಬೆಂಗಳೂರು: ನಿಮ್ಮ ಗಾಂಧಿ ಭಾರತ ಕರ್ನಾಟಕದಲ್ಲಿ ಹೇಗಿದೆ ಅಂತ ರಾಹುಲ್, ಖರ್ಗೆ ಮಾಹಿತಿ ಪಡೆಯಲಿ ಎಂದು ಬಿಜೆಪಿ MLC ರವಿಕುಮಾರ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಚ್ಚು-ಲಾಂಗು ತೆಗೆದುಕೊಂಡು ಬೀದಿ ಬೀದಿಯಲ್ಲಿ ಓಡಾಡುತ್ತಿದ್ದಾರೆ. ಹಿಂಸೆ ತಾಂಡವ ಆಡುತ್ತಿದೆ. ಕರ್ನಾಟಕ ಕ್ರೈಮ್‌ಗೆ ಹೆಸರಾಗುತ್ತಿದೆ. ಕರ್ನಾಟಕ ರಾಜ್ಯ ಬಿಹಾರ ಆಗ್ತಿದೆ. ಇದೇನಾ ನಿಮ್ಮ ಕನಸಿನ ಗಾಂಧಿ ಭಾರತ? ಮಂಗಳೂರಿನ ಬ್ಯಾಂಕ್‌ನಲ್ಲಿ ದರೋಡೆ ಆಗಿದೆ.
ಸಿಸಿ ಟಿವಿ ಫೋಟೇಜ್ ಇಲ್ಲ. ಏನ್ ಮಾಡ್ತಿದೆ ನಿಮ್ಮ ಪೊಲೀಸ್ ಇಲಾಖೆ? ಅಂತರ್ ರಾಜ್ಯ ದರೋಡೆಕೋರರಿಗೆ ಕರ್ನಾಟಕ ಸ್ವರ್ಗ ಆಗಿದೆ. ಕರ್ನಾಟಕ ಸುರಕ್ಷಿತ ರಾಜ್ಯ ಅಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಬಗ್ಗೆ ರಿಪೋರ್ಟ್ ತರಿಸಿಕೊಳ್ಳಿ ಮೊದಲು.ನಿಮ್ಮ ಗಾಂಧಿ ಭಾರತ ಕರ್ನಾಟಕದಲ್ಲಿ ಹೇಗಿದೆ ಅಂತ ರಾಹುಲ್, ಖರ್ಗೆ ಮಾಹಿತಿ ಪಡೆಯಲಿ ಎಂದು ಕಿಡಿಕಾರಿದ್ದಾರೆ.
ನೀರು, ವಿದ್ಯುತ್ ದರ, ಮದ್ಯ, ಬೆಲೆ ಏರಿಕೆ ಆಗ್ತಿದೆ. ಯಾವಾಗ ಹಣ ಬೇಕೋ ಆಗ ಬೆಲೆ ಏರಿಕೆ ಮಾಡ್ತಾರೆ. ಇದು ಕಾಂಗ್ರೆಸ್‌ನ ಹೊಸ ಪಾಲಿಸಿಯಾಗಿದೆ. ಅಧಿಕಾರಿಗಳು ಭ್ರಷ್ಟರಂತೆ ಇವರು ಪ್ರಾಮಾಣಿಕರಂತೆ. ಅಧಿಕಾರಿಗಳು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಾಂಧಿ ಕಂಡ ಭಾರತ ಮಾಡ್ತಿರೋದು ಕಾಂಗ್ರೆಸ್‌ನವರಲ್ಲ. ನರೇಂದ್ರ ಮೋದಿಯವರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಆಗ್ರಹಿಸಿದ್ದಾರೆ.