ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ರಾಹುಲ್ ವಸಂತ ಸಿದ್ದಮ್ಮನಹಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಿಂ. ಪಂಚಾಕ್ಷರಿ ಗವಾಯಿಗಳರವರ 81ನೇ ಹಾಗೂ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳರವರ 15ನೇಯ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗದಗ-ಬೆಟಗೇರಿ ಜನರಲ್ ವರ್ಕ್ಸ್ ಹಾಗೂ ಹಮಾಲರ ಚಕ್ಕಡಿಯವರ ಸಮಿತಿಯಿಂದ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗೆ ಯುವ ಮುಖಂಡ ಕೃಷ್ಣಗೌಡ ಪಾಟೀಲ ಚಾಲನೆ ನೀಡಿದರು. ಪೂಜ್ಯ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಕುಸ್ತಿಯಲ್ಲಿ ರಾಹುಲ್ ವಸಂತ ಸಿದ್ದಮ್ಮನಹಳ್ಳಿ ವಿಜೇತರಾದ ನಿಮಿತ್ತ ಗದಗ ಜಿಲ್ಲಾ ಕುಸ್ತಿ ತರಬೇತಿದಾರ ವಿನಾಯಕ ಎಂಕಂಚಿ 1 ಕೆ.ಜಿ ತೂಕದ ಬೆಳ್ಳಿ ಗದೆಯನ್ನು ನೀಡಿ ಸನ್ಮಾನಿಸಿದರು.

Advertisement

ಸುಭಾಸ ಸಂಗಪ್ಪ ಕಡಿಗೇರಿ, ಆದಪ್ಪ ಮಾರೆಪ್ಪನವರ, ಇಮಾಮಸಾಬ ರೋಣದ, ಅಮರಪ್ಪ ಕುಡಗುಂಟಿ ಕುಸ್ತಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಸಂಘದ ಸದಸ್ಯರುಗಳಾದ ಅಯ್ಯಪ್ಪ ನಾಯ್ಕರ, ಮಹಮ್ಮದಸಾಬ ವಾಲೇಕರ, ಇಮಾಮಸಾಬ ರೋಣದ, ಗೋವಿಂದಪ್ಪ ಮುಂಡರಗಿ, ರಾಮಣ್ಣ ವಾಲ್ಮೀಕಿ, ಯಲ್ಲಪ್ಪ ಗೊಂದಿ, ರವಿ ರಾಯರದೊಡ್ಡಿ, ಮಕ್ತುಮಸಾಬ ನಾಗನೂರ, ರಂಗಪ್ಪ ಯರಗುಡಿ, ಬಸವರಾಜ ಸೂಡಿ, ಮಾರುತಿ ರಾಯರದೊಡ್ಡಿ, ದೇವರಾಜ ಬಿನ್ನಾಳ, ಯಲ್ಲಪ್ಪ ಬೇವಿನಮರದ, ಬಸವರಾಜ ಬೇವಿನಮರದ, ಸುಭಾಸ ಕಟಗೇರಿ, ಇಮಾಮಸಾಬ ರೋಣದ, ಅಯ್ಯಪ್ಪ ನಾಯ್ಕರ, ರಾಮಣ್ಣ ವಾಲ್ಮೀಕಿ, ಗೋವಿಂದಪ್ಪ ಮುಂಡರಗಿ, ಬಸಣ್ಣ ಸೂಡಿ, ಮಾಬುಸಾಬ ವಾಲಿಕಾರ, ಮಾರುತಿ ರಾಲದೊಡ್ಡಿ, ದೇವರಾಜ ಬಿನ್ನಾಳ, ಯಲ್ಲಪ್ಪ ಬೇವಿನಮರದ, ರವಿ ರಾಲದೊಡ್ಡಿ, ವಸಂತ ಸಿದ್ದಮ್ಮನಹಳ್ಳಿ, ದೇವಪ್ಪ ಗಡಾದ, ಅಮರಪ್ಪ ಗುಡಗುಂದಿ, ಸೋಮನಾಥ ಹಾತಲಗೇರಿ, ದೇವಪ್ಪ ಕನ್ಯಾಳ, ಅಮೀನಸಾಬ ಅಣ್ಣೀಗೇರಿ, ಅಲ್ಲಾಸಾಬ ನದಾಫ್, ರಾಮಚಂದ್ರ ಹರಿಜನ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿ.ಬಿ. ಅಸೂಟಿ, ಅಶೋಕ ಸಂಕಣ್ಣವರ, ಪ್ರಕಾಶ ಕರಿ, ವಸಂತ ಸಿದ್ದಮ್ಮನಹಳ್ಳಿ, ರಾಮಣ್ಣ ಪಲದೊಡ್ಡಿ ಸೇರಿದಂತೆ ಹಮಾಲರ ಚಕ್ಕಡಿಯವರ ಸಮಿತಿಯ ಪದಾಧಿಕಾರಿಗಳು, ದಲಾಲ ಅಂಗಡಿಯ ವರ್ತಕರು, ಖರೀದಿದಾರರ ಅಂಗಡಿ ವರ್ತಕರು, ಬ್ರೋಕರ್‌ದಾರರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here