ರಾಯಚೂರು:- ಸಾರ್ವಜನಿಕರಿಗೆ ಸಂಕಷ್ಟ ಒಡ್ಡುತ್ತಿದ್ದ ಚಿರತೆಯನ್ನು ತಾಲೂಕು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಈ ಘಟನೆ ರಾಯಚೂರು ತಾಲೂಕಿನ ಮಾಲಿಯಬಾದ್ ಗೋಶಾಲೆ ಗುಡ್ಡದ ಪ್ರದೇಶದಲ್ಲಿ ಜರುಗಿದೆ. ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕರವರ ಯೋಜನೆಯಂತೆ ಅಳವಡಿಸಿದ ಬೋನಿನಲ್ಲಿ ಚಿರತೆ ಬೀಳುವಂತೆ ತಂತ್ರ ರೂಪಿಸಲಾಗಿದ್ದು, ಅದರಿಂದ ಚಿರತೆ ಸುಲಭವಾಗಿ ಬೋನಿನೊಳಗೆ ಪ್ರವೇಶಿಸಿತು. ಈ ಪ್ರದೇಶದಲ್ಲಿ ಈಗಾಗಲೇ ಮೂರು ಚಿರತೆಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಗೋವಿಂದರಾಜು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಚಿರತೆ ಆಪರೇಷನ್ ಯಶಸ್ವಿಯಾಗಿ ಪೂರ್ಣಗೊಂಡಿತು.
ರಾಜೇಶ್ ನಾಯಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಮೌನೇಶ್, ಹುಸೇನ್ ಬಾಷಾ ಹಾಗೂ ಸಿಬ್ಬಂದಿ ಯಲ್ಲಪ್ಪ, ಭೀಮೇಶ್, ವೀರೇಶ್, ಬಾವಸಾಬ್, ಕನಕಪ್ಪ, ಸುಗುರೇಶ್, ಶಿವಕುಮಾರ್, ರಮೇಶ್, ಚಾಲಕರಾದ ವಿಜಯ್ ಮತ್ತು ಮೌನೇಶ್ ಆಚಾರಿ ಪಾಲ್ಗೊಂಡಿದ್ದರು.