ರಾಯಚೂರು: ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಕೊಲೆ ಮಾಡಿರುವ ಘಟನೆ ರಾಯಚೂರು ನಗರದ ರಾಗಿಮಾನಗಡ್ಡ ಬಡಾವಣೆಯಲ್ಲಿ ನಡೆದಿದೆ. 37 ವರ್ಷದ ನರಸಿಂಹಲು ಮೃತ ದುರ್ಧೈವಿಯಾಗಿದ್ದು, ರಾಗಿಮನಗಡ್ಡದಲ್ಲಿ ಕಾರ್ನರ್ ಬಳಿ ಮನೆ ಹೊಂದಿರುವ ಮೃತ ನರಸಿಂಹ, ನಿನ್ನೆ ರಾತ್ರಿ ರಸ್ತೆಯಲ್ಲಿ ಅದೇ ಏರಿಯಾದ ಹುಡುಗರು ಪಟಾಕಿ ಹೊಡೆಯುತ್ತಿದ್ದರು.
ಆಗ ಯಾಕೆ ಪಟಾಕಿ ಹೊಡೆಯುತ್ತಿದ್ದಿರಿ ಅಂತ ನರಸಿಂಹ ಪ್ರಶ್ನಿಸಿದ್ದಾರೆ. ಆಗ ಏರಿಯಾ ಹುಡುಗರು ಮಾತು ಕೇಳದ ಹಿನ್ನೆಲೆ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯವರಿಂದ ನರಸಿಂಹನ ಹತ್ಯೆ ಮಾಡಿದ್ದಾರೆ.
ಮೃತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿಲ್ಲ. ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದರು ಬಂದಿದ್ದು, ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೈದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.