ರಾಯಚೂರು:– ಜಿಲ್ಲೆಯ ಲಿಂಗಸೂಗೂರ ತಾಲ್ಲೂಕಿನ ಮುದಗಲ್ ಪಟ್ಟಣದ ರವಿವಾರದ ಸಂತೆಯಲ್ಲಿ ಎರಡು ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವ ವಿಡಿಯೋ ಎಪಿಎಂಸಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹುನುಕುಂಟಿ ಗ್ರಾಮದ ಬಸವರಾಜ ಕಿಲ್ಲಾರಹಟ್ಟಿ ರವರು ರವಿವಾರದ ಸಂತೆಯಲ್ಲಿ ಸುಮಾರು 22 ಸಾವಿರ ರೂಗಳ ಬೆಳೆ ಬಾಳುವ ಎರಡು ಕುರಿಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಕುರಿಗಳ ಮಾಲೀಕನಿಗೆ ಕಳ್ಳರು ಹಣ ಕೊಡದೆ ಆ ಎರಡು ಕುರಿಗಳನ್ನು ಕಳ್ಳತನ ಮಾಡಿಕೊಂಡು ಮೋಟಾರ್ ಸೈಕಲ್ ಮೂಲಕ ಹೋಗುತ್ತಿರುವ ವಿಡಿಯೋ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋದಲ್ಲಿ ಇರುವ ವ್ಯಕ್ತಿಗಳು ಎಲ್ಲಾದರೂ ಕಂಡರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪಿಎಸ್ಐ ವೆಂಕಟೇಶ ಮಾಡಗೇರಿ ಮನವಿ ಮಾಡಿಕೊಂಡಿದ್ದಾರೆ. ಘಟನಾಸ್ಥಳಕ್ಕೆ ಕ್ರೈಂ ಪೊಲೀಸ್ ಸಿಬ್ಬಂದಿಗಳಾದ ವೆಂಕಟೇಶ ಹಾಗೂ ಅಮರೇಶ ಎಚ್, ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.



