ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಜಮೀನಿಗೆ ಉರುಳಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಜಿಲ್ಲೆಯ ನಸಲಾಪುರ ಗ್ರಾಮದ ಹತ್ತಿರ ಭಾನುವಾರ ನಡೆದಿದೆ. ಜಿಲ್ಲೆಯ ಮಾನ್ವಿ ಘಟಕದ ಬಸ್ ಮಾನ್ವಿ ಪಟ್ಟಣದಿಂದ ಗಂಗಾವತಿ ನಗರಕ್ಕೆ ತೆರಳುವ ಮಾರ್ಗ ಮದ್ಯದ ನಸಲಾಪುರ,
Advertisement
ಗ್ರಾಮದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಹುರುಳಿದ್ದು, ಬಸ್ ನಲ್ಲಿದ್ದ 45 ಕ್ಕೂ ಅಧಿಕ ಪ್ರಯಾಣಿಕರ ಫೈಕಿ 8 ಜನರಿಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಗಾಯಾಳುಗಳಿಗೆ ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.