ರಾಯಚೂರು:– ಜಿಲ್ಲೆಯ ಸಿರವಾರ ತಾಲೂಕಿನ ಪ್ರಸಿದ್ದ ಮಹಾಲಕ್ಷ್ಮಿ ದೇವಾಲಯಕ್ಕೆ ಖದೀಮರು ಕನ್ನಾ ಹಾಕಿದ್ದಾರೆ. ದೇವರ ಮೈಮೇಲಿದ್ದ ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ.
ದೇವರಿಗೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ ಬರೋಬ್ಬರಿ 290 ಗ್ರಾಂ ಚಿನ್ನಾಭರಣ ಕಳುವಾಗಿದೆ. 80 ಗ್ರಾಂ ತೂಕದ ವೆಂಕಟೇಶ್ವರ ಸ್ವಾಮಿ ಕಿರೀಟ, 30 ಗ್ರಾಂ ತೂಕದ ಲಕ್ಷ್ಮೀ ಕಿರೀಟ, 140 ಗ್ರಾಂ ಪಾದಗಳು, 40 ಗ್ರಾಂ ಪದಕ ಸೇರಿ ಒಟ್ಟು 290 ಗ್ರಾಂ ಚಿನ್ನಾಭರಣ ಕಳುವಾಗಿದೆ.
ಇನ್ನೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದರೂ ದೇವಾಲಯ ಆಡಳಿತ ಮಂಡಳಿ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಹೀಗಾಗಿ ಸುಲಭವಾಗಿ ದೇವಾಲಯಕ್ಕೆ ನುಗ್ಗಿದ ಕಳ್ಳರು, ಚಿನ್ನಾಭರಣ ಕದ್ದು ಪರಾರಿ ಆಗಿದ್ದಾರೆ.
ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕಳ್ಳರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.