ಬೆಳಗಾವಿ:- ಸೌಂದರ್ಯ ವರ್ಧಕಗಳ ಹೆಸರಿನಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಬ್ಯೂಟಿ ಪಾರ್ಲರ್ ಮತ್ತು ಸ್ಕಿನ್ ಕೇರ್ ಸೆಂಟರಗಳು ಹಾಗೂ ಆಸ್ಪತ್ರೆಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು. ಬೆಳಗಾವಿ ನಗರದಾದ್ಯಂತ ಆರೋಗ್ಯ ಅಧಿಕಾರಿಗಳ ದಾಳಿ ವೇಳೆ ಕೆಲವೇ ಕೆಲವು ಅಧಿಕೃತ ಬ್ಯೂಟಿ ಪಾರ್ಲರ್, ಚರ್ಮಚಿಕಿತ್ಸಾ ಕೇಂದ್ರಗಳಾಗಿದ್ದು,
ಉಳಿದವು ಅನಧಿಕೃತ ಮತ್ತು ತಿಳುವಳಿಕೆ ಇಲ್ಲದವರು ನಡೆಸುತ್ತಿದ್ದರು ಎಂಬುವುದು ಕಂಡುಬಂದಿದೆ. ನಗರದ ನಾಲ್ಕು ಅಂತಹ ಆಸ್ಪತ್ರೆ, ಕ್ಲಿನಿಕ್ ಮತ್ತು ಬ್ಯೂಟಿ ಸೆಂಟರಗಳನ್ನು ಸೀಜ್ ಮಾಡಿ ಬಂದ್ ಮಾಡಲಾಗಿದ್ದು, 7 ಪಾರ್ಲರ್/ ಆಸ್ಪತ್ರೆಗಳಿಗೆ ನೋಟೀಸ್ ನೀಡಲಾಗಿದೆ. ಅಧಿಕಾರಿಗಳ ದಾಳಿ ವೇಳೆ, ಆರ್ ಪಿಡಿ, ಟಿಳಕವಾಡಿ, ಕ್ಯಾಂಪ್, ಶಾಹೂ ನಗರ, ರವಿವಾರ ಪೇಟ, ಅನಗೋಳ, ವಡಗಾಂವ,
ಸದಾಶಿವ ನಗರ ಮುಂತಾದ ಪ್ರದೇಶಗಳಲ್ಲಿನ ಬ್ಯೂಟಿ ಪಾರ್ಲರ್ ಗಳು ಅಧಿಕಾರಿಗಳ ದಾಳಿ ಭಯದಿಂದ ಬಂದ್ ಮಾಡಿಕೊಂಡು ಪರಾರಿಯಾಗಿರುವುದು ಗಮನ ಸೆಳೆದಿದೆ. ಅನಧಿಕೃತ ಬ್ಯೂಟಿ ಪಾರ್ಲರ್, ಸ್ಕಿನ್ ಕೇರ್ ಸೆಂಟರ್, ಸೌಂಧರ್ಯವರ್ಧಕ ಹೆಸರಿನ ಆಸ್ಪತ್ರೆಗಳ ಮಾಹಿತಿ ಸಾರ್ವಜನಿಕರು ಮುಕ್ತವಾಗಿ ತಿಳಿಸಬೇಕು, ಅನಧಿಕೃಬ್ರಪಾರ್ಲರಗಳಿಗೆ ಹೋಗಿ ಹಣ ಹಾಗೂ ಆರೋಗ್ಯ ಹಾನಿ ಮಾಡಿಕೊಳ್ಳಬಾರದು ಎಂದು ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ