ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರಿನ ಬೆಳೆಹಾನಿ ಸಂಕಷ್ಟದ ನಡುವೆಯೂ ಸಂಪ್ರದಾಯವೆನ್ನುವಂತೆ ಸಕಲ ಕಷ್ಟಗಳ ಪರಿಹರಿಸುವ ಗಣೇಶನನ್ನು ಬರಮಾಡಿಕೊಳ್ಳುವ ಗಣೇಶ ಚತುರ್ಥಿ ಹಬ್ಬದ ಖುಷಿಯನ್ನು ಮಳೆ ಕಸಿದುಕೊಳ್ಳುತ್ತಿದೆ.
Advertisement
ಮಂಗಳವಾರ ಸಂಜೆಯೂ ಮಳೆ ಸುರಿದ ಪರಿಣಾಮ ಗಣೇಶನ ಪೂಜೆಗೆ ಬೇಕಾಗುವ ಪೂಜಾ ಸಾಮಗ್ರಿಗಳ ಖರೀದಿ ಆಗಮಿಸಿದ್ದ ಜನರು, ಬೀದಿ ಬದಿ ವ್ಯಾಪಾರಸ್ಥರು ಪರದಾಡಿದರು. ಮಳೆಯಿಂದ ವ್ಯಾಪಾರಕ್ಕೆ ಅಡ್ಡಿಯಾಯಿತು. ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ಅಳಿದುಳಿದ ಬೆಳೆ ಕಟಾವು, ಒಕ್ಕಲಿ ಮಾಡುತ್ತಿರುವ ರೈತರು ಬೆಳೆ/ಮಹಸೀಲು ಸಂರಕ್ಷಿಸಲು ಪರದಾಡಿದರು. ಮಳೆ ಮುಂದುವರೆಯುತ್ತದೆ ಎಂಬ ಮಾಹಿತಿಯಿಂದ ರೈತ ಸಮುದಾಯಕ್ಕೆ ದಿಕ್ಕು ತೋಚದಂತಾಗಿದೆ. ವಿಘ್ನ ವಿನಾಶಕನೇ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಷ್ಟೇ.