ಮಳೆ ಅವಾಂತರ: ಕಾರಿನ ಮೇಲೆ ಬಿದ್ದ ಬೃಹತ್ ಮರ.. ತಪ್ಪಿದ ದುರಂತ!

0
Spread the love

ಮಂಗಳೂರು:– ಭಾರೀ ಮಳೆಯಿಂದಾಗಿ ಬೃಹತ್‌ ಮಾವಿನ ಮರವೊಂದು ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಘಟನೆ ಕಡಬ ತಾಲೂಕಿನ‌ ರಾಮಕುಂಜದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಭಾರೀ ಮಳೆ ಸುರಿಯುತ್ತಿರುವ ಕಾರಣ ಈ ಅವಘಡ ಸಂಭವಿಸಿದೆ.

Advertisement

ಅಬ್ದುಲ್ ಸಲೀಂ ಎಂಬವರು ರಾಮಕುಂಜದ ರಸ್ತೆ ಬದಿ ತನ್ನ ಮಾರುತಿ 800 ಕಾರನ್ನು ನಿಲ್ಲಿಸಿ ಹೊರ ಹೋಗಿದ್ದರು. ಕಾರಿನಲ್ಲಿ ರಹಿಮಾನ್, ಅಬ್ಬಾಸ್ ಹಾಗೂ ರಮ್ಲಾನ್ ಕುಳಿತಿದ್ದರು. ಈ ವೇಳೆ ಮರ ಬೀಳುವ ಶಬ್ದ ಕೇಳಿ ಮೂವರು ಕಾರಿನಿಂದ ಇಳಿದು ದೂರ ಹೋಗಿದ್ದಾರೆ. ಅಷ್ಟರಲ್ಲೇ ಮಾವಿನ ಮರ ಕಾರಿ‌ನ ಮೇಲೆ ಬಿದ್ದಿದೆ. ಕಾರು‌ ಸಂಪೂರ್ಣ ಜಖಂಗೊಂಡು ಹಾನಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here