ಮಳೆ ಅವಾಂತರ: ಕುಸಿದ ಎರಡು ಮನೆಗಳು ತಪ್ಪಿದ ದುರಂತ!

0
Spread the love

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಕನಾಳ ಗ್ರಾಮದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ 2 ಮನೆಗಳು ಧರೆಗುರುಳಿದ ಘಟನೆ ಜರುಗಿದೆ.

Advertisement

ಅಬ್ಬರದ ಗಾಳಿಮಳೆಗೆ ಗ್ರಾಮದ ರಾಘು ಇಡುಕಪ್ಪ ನಾಯ್ಕ ಮತ್ತು ದಾಕ್ಷಾಯಿಣಿ ಇಡುಕಪ್ಪ ನಾಯ್ಕ ಎಂಬವರಿಗೆ ಸೇರಿದ ಮನೆ ಕುಸಿದು ಬಿದ್ದು ಸಾಕಷ್ಟು ಹಾನಿಯುಂಟಾಗಿದೆ.

ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ವಸ್ತುಗಳು ನಾಶವಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಇಲ್ಲದೇ ಆ ಬಡ ಕುಟುಂಬ ಇದೀಗ ಬೀದಿಪಾಲಾಗಿದೆ.

ಸಂತ್ರಸ್ಥರಿಗೆ ವಾಸ ಮಾಡಲು ಸೂರಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here