ಬೆಂಗಳೂರು:- ರಾಜ್ಯದ ದಕ್ಷಿಣ ಒಳನಡಿನಲ್ಲಿ ಇಂದಿನಿಂದ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.ಬೆಂಗಳೂರಿನಲ್ಲಿ ಇಂದಿನಿಂದ ಕೆಲವು ದಿನಗಳ ಕಾಲ ತಂಪು ಗಾಳಿ, ಮೋಡ ಕವಿದ ವಾತಾವರಣ ಉಂಟಾಗಲಿದೆ. ಉಳಿದಂತೆ ಇಲ್ಲಿ ಒಂದೆರಡು ಕಡೆ ಮಳೆಯಾಗುವ ಮುನ್ಸೂಚನೆ ಇದೆ.
Advertisement
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಉತ್ತರ ಒಳನಾಡಿನಲ್ಲಿ ಮಳೆ ಮುನ್ಸೂಚನೆ ಇಲ್ಲ. ಇಲ್ಲಿ ಅಧಿಕ ತಾಪಮಾನ ಉಂಟಾಗಲಿದ್ದು, ಶುಷ್ಕ ವಾತಾವರಣ ಮುಂದುವರಿಯಲಿದೆ. ಕೆಲವು ದಿನಗಳಲ್ಲಿ ಬೆಳಗ್ಗೆ ಮತ್ತು ತಡರಾತ್ರಿ ಚಳಿ ವಾತಾವರಣ ಇರಬಹುದು ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ