ಬೆಂಗಳೂರು: ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 27ರ ಬಳಿಕ ಭಾರಿ ಮಳೆಯಾಗಲಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ತಿಡಗುಂಡಿ, ಬಿಳಗಿ, ಕೆರೂರು, ಮಾನ್ವಿ, ಯಡ್ರಾಮಿ, ಕುಷ್ಟಗಿ, ಆಲಮಟ್ಟಿ, ದೇವರಹಿಪ್ಪರಗಿ, ಗುಳೇಗೋಡು, ಅಫ್ಝಲ್ಪುರ, ಅಣ್ಣಿಗೆರೆ, ಬೆಳ್ಳೂರು, ಗುರುಮಿಟ್ಕಲ್, ಸೈದಾಪುರ, ಶೋರಾಪುರ, ಝಲ್ಕಿ, ಆಗುಂಬೆ, ಔರಾದ್, ಬಸವನಬಾಗೇವಾಡಿ, ಗಬ್ಬೂರು, ಗೋಪಾಲನಗರ, ಕೆಂಭಾವಿ, ಲೋಕಾಪುರ, ಸೇಡಂ, ವಿಜಯಪುರ, ಬೀದರ್, ಗದಗ, ಗಂಗಾವತಿ, ಗೋಕರ್ಣ, ಹುಂಚದಕಟ್ಟೆ, ಕಲಬು



