ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವೆಡೆ ಸಾಕಷ್ಟು ಅವಾಂತರ ಸಂಭವಿಸಿದೆ.
Advertisement
ಅದರಂತೆ ಭಾರೀ ಗಾಳಿ ಮಳೆಗೆ ಬೃಹತ್ ಮರ ಬಿದ್ದು ಮನೆ ಹಾಗೂ ಕಾರಿಗೆ ಹಾನಿಯಾಗಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಹೊರ ವಲಯದ ದೇವಸ್ತೂರು ಎಂಬಲ್ಲಿ ನಡೆದಿದೆ.
ದೇವಸ್ತೂರು ಗ್ರಾಮದ ಕುಕ್ಕೇರ ಚಿಮ್ಮ ಎಂಬುವವರ ಮನೆ ಮೇಲೆ ಒಣಗಿದ ಗೋಳಿ ಮರ ಬಿದ್ದ ಪರಿಣಾಮ ಮನೆಯ ಮುಂಭಾಗ ನಿಲ್ಲಿಸಿದ ಕಾರು ಜಖಂಗೊಂಡಿದೆ. ಇದರ ಜೊತೆಗೆ ಮನೆಯ ಮೇಲ್ಬಾಗಕ್ಕೆ ಮರ ಬಿದ್ದ ಹಿನ್ನಲೆ ಮನೆಗೂ ಹಾನಿಯಾಗಿದೆ.
ವಿಚಾರ ತಿಳಿದಂತೆ ಮಡಿಕೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.