ಬೆಂಗಳೂರು:- ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿದೆ. ರಸ್ತೆ, ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಇನ್ನು ಶಿವಾನಂದ ಸರ್ಕಲ್ ಬಳಿಯಿರುವ ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಹೋಟೆಲ್ ಮಳೆ ನೀರಿನಿಂದ ಜಲಾವೃತವಾಗಿದೆ.
ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್ ಅಂತಿರಬೇಕು.. ಚಟಪಟ… ಚಟಪಟ.. ಅನ್ನೋ ಡೈಲಾಗ್ ಹೊಡೆದು ಸಿಕ್ಕಾಪಟ್ಟೆ ಫೇಮಸ್ ಆಗಿರುವ ಚಂದ್ರು ಮಳೆಯಿಂದ ನಷ್ಟ ಅನುಭವಿಸಿದ್ದಾರೆ. ಬೆಂಗಳೂರು ಕೆಫೆ ಕಟ್ಟಡದಲ್ಲಿರುವ ಚಂದ್ರು ಮಾಲೀಕತ್ವದ ಹೋಟೆಲ್ ಬೇಸ್ಮೆಂಟ್ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಕಳೆದ 2 ದಿನಗಳಿಂದ ಹೋಟೆಲ್ ಬಂದ್ ಆಗಿದೆ. ಈ ಬಗ್ಗೆ ಮಾಲೀಕ ಚಂದ್ರು ಮಾತನಾಡಿ, ಘಟನೆಯಿಂದ ಸುಮಾರು 15 ಲಕ್ಷ ರೂ. ವ್ಯಾಪಾರ ಲಾಸ್ ಆಗಿದೆ ಎಂದು ಅವಲತ್ತುತೋಡಿಕೊಂಡಿದ್ದಾರೆ.



