ಮಳೆ ಅವಾಂತರ: ಧರೆಗುರುಳಿದ 20ಕ್ಕೂ ಅಧಿಕ ಮರಗಳು, ಕಾರುಗಳು ಜಖಂ!

0
Spread the love

ಹಾವೇರಿ:- ನಗರದ ಹಲವೆಡೆ ವರುಣರಾಯ ಅಬ್ಬರಿಸಿದ್ದು, 20ಕ್ಕೂ ಅಧಿಕ ಮರಗಳು ಧರೆಗೆ ಉರುಳಿದ ಘಟನೆ ಜರುಗಿದೆ. ಭಾರೀ ಗಾಳಿಗೆ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಮನೆಯ ಮೇಲ್ಛಾವಣಿಗೆ ಹಾಕಿದ್ದ ತಗಡುಗಳು ಹಾರಿ ಹೋಗಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ.

Advertisement

ಜಿಲ್ಲೆಯ ಹಲವೆಡೆ ಸಂಜೆ 1 ಗಂಟೆ ಕಾಲ ಧಾರಾಕಾರ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ ಪರಿಣಾಮ 4 ಕಾರುಗಳು ಜಖಂ ಆಗಿವೆ. ತಗಡುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಆದರೆ ಗಾಳಿ ಮಳೆಯು ಅಬ್ಬರ ಆರಂಭ ಆಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here