ಬೆಂಗಳೂರು: ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊನೆಗೂ ವರ್ಷಧಾರೆಯಾಗಿದ್ದು, ಇಂದು ಮಧ್ಯಾಹ್ನ ಮಳೆರಾಯ ತಂಪೆರದಿದ್ದಾನೆ. ಕಾರ್ಪೋರೇಷನ್, ಶಾಂತಿನಗರ, ಕೆ.ಆರ್.ಮಾರ್ಕೆಟ್, ಸಂಪಂಗಿರಾಮನಗರ, ಅವೆನ್ಯೂ ರೋಡ್ ಸೇರಿದಂತೆ ಕೆಲವೆಢ ಮಳೆ ಸುರಿಯುತ್ತಿದೆ.
Advertisement
ಮುಂದಿನ ಮೂರು ಗಂಟೆಗಳ ರಾಜ್ಯಾಧ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಈಗಾಗಲೇ ಅನೇಕ ಕಡೆಗಳಲ್ಲಿ ಮಳೆ ಆರಂಭಗೊಂಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಯಲ್ಲಿ ಮಳೆ ಸಾಧ್ಯತೆ. ಗುಡುಗು, ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.